Sunday, June 21, 2026
spot_imgspot_img
spot_imgspot_img

ಬಲೂನ್ ಮಾರುವ ನೆಪದಲ್ಲಿ ಕಳ್ಳತನಕ್ಕೆ ಸ್ಕೆಚ್ ಹಾಕುತ್ತಿದ್ದ ಬಗಾರಿಯಾ ಗ್ಯಾಂಗ್ ಖಾಕಿ ವಶಕ್ಕೆ!

- Advertisement -
- Advertisement -

ಬೆಂಗಳೂರು: ಬಲೂನ್ ಮಾರುವ ನೆಪದಲ್ಲಿ ಕಳ್ಳತನಕ್ಕೆ ಸ್ಕೆಚ್ ಹಾಕುತ್ತಿದ್ದ ಬಗಾರಿಯಾ ಗ್ಯಾಂಗ್ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಮುಖೇಶ್, ಧರ್ಮ, ಲಕ್ಷ್ಮಣ್ ಎನ್ನಲಾಗಿದೆ.

ಬಲೂನ್ ಮಾರುವ ನೆಪದಲ್ಲಿ ಬಗಾರಿಯಾ ಗ್ಯಾಂಗ್ ಹಗಲು ವೇಳೆ ಏರಿಯಾಗಳನ್ನು ಸುತ್ತುವರಿಯುತ್ತಿದ್ದು, ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ ರಾತ್ರಿ ಕಳ್ಳತನಕ್ಕೆ ಇಳಿಯುತ್ತಿತ್ತು. ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ದೋಚಿ ಎಸ್ಕೆಪ್ ಆಗುತ್ತಿತ್ತು.

ಅಮೃತನಗರದ ಮನೆಯೊಂದಕ್ಕೆ ಕನ್ನ ಹಾಕಿದ್ದ ಖದೀಮರ ಗ್ಯಾಂಗ್, ರಾಜಸ್ಥಾನದ ಅಜೀರ್‌ಗೆ ಎಸ್ಕೆಪ್ ಆಗಿತ್ತು. ಪ್ರಕರಣ ದಾಖಲಿಸಿಕೊಂಡ ಅಮೃತಹಳ್ಳಿ ಪೊಲೀಸರು, ರಾಜಸ್ತಾನಕ್ಕೆ ತೆರಳಿ ಸತತ 1 ವಾರಗಳ ಕಾಲ ಪರಿಶ್ರಮ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!