Saturday, May 18, 2024
spot_imgspot_img
spot_imgspot_img

ಬಸ್ಸಿನಲ್ಲೇ ಬಿಯರ್ ಕುಡಿದ ಹೈಸ್ಕೂಲ್ ವಿದ್ಯಾರ್ಥಿನಿಯರು : ವಿಡಿಯೋ ವೈರಲ್

- Advertisement -G L Acharya panikkar
- Advertisement -

ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿ -ವಿದ್ಯಾರ್ಥಿನಿಯರು ಚಲಿಸುತ್ತಿದ್ದ ಬಸ್ಸಿನಲ್ಲೇ ಮದ್ಯ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋ ಅನ್ನು ವಿದ್ಯಾರ್ಥಿಯೊಬ್ಬ ರೆಕಾರ್ಡ್ ಮಾಡಿದ್ದಾನೆ ಎನ್ನಲಾಗಿದೆ. ಈ ವಿಡಿಯೋ ದಲ್ಲಿ ಹುಡುಗಿಯರು ಮತ್ತು ಹುಡುಗರ ಗುಂಪು ಬಿಯರ್ ಬಾಟಲಿಯನ್ನು ತೆರೆದು ಸೇವಿಸುವುದನ್ನು ತೋರಿಸುತ್ತದೆ.

ತಮಿಳುನಾಡಿನ ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿ -ವಿದ್ಯಾರ್ಥಿನಿಯರು ತಿರುಕಝಕುಂದ್ರಂನಿಂದ ಥಾಚೂರಿಗೆ ತೆರಳುತ್ತಿದ್ದ ಬಸ್ಸನ್ನು ಹತ್ತಿದ ವಿದ್ಯಾರ್ಥಿನಿಯರು ಬ್ಯಾಗಿನಿಂದ ಬಿಯರ್‌ ಬಾಟೆಲ್‌ ಒಂದನ್ನು ತೆಗೆದು ಕುಡಿಯಲಾರಂಭಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಚೆಂಗಲ್ಪಟ್ಟುವಿನ ಸರ್ಕಾರಿ ಶಾಲೆಯವರು ಎಂದು ನಂಬಲಾಗಿದೆ.ಆರಂಭದಲ್ಲಿ ಇದು ಹಳೆಯ ವಿಡಿಯೋ ಎಂದು ಭಾವಿಸಲಾಗಿತ್ತು, ನಂತರ ಮಂಗಳವಾರದಂದು ಈ ಘಟನೆ ನಡೆದಿರುವುದು ಪತ್ತೆಯಾಗಿದೆ.

ಘಟನೆಯನ್ನು ದೃಢಪಡಿಸಿದ ಚೆಂಗಲ್ಪಟ್ಟು ಜಿಲ್ಲಾ ಶಿಕ್ಷಣಾಧಿಕಾರಿ ರೋಸ್ ನಿರ್ಮಲಾ, “ಇದು ಶಾಲೆಯ ಹೊರಗೆ ನಡೆದಿರುವುದರಿಂದ, ಪೊಲೀಸರು ಅದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಅದು ಮುಗಿದ ನಂತರ, ನಾವು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ “ಎಂದಿದ್ದಾರೆ.

- Advertisement -

Related news

error: Content is protected !!