Saturday, May 18, 2024
spot_imgspot_img
spot_imgspot_img

ಬಸ್‌ ನಿಲ್ದಾಣದಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿದ್ದಾರೆ ಹುಷಾರ್‌.!! ಸೈರನ್ ಮೊಳಗಲಿದ್ದು , ಕ್ಷಣಾರ್ಧದಲ್ಲೇ ಸ್ಥಳಕ್ಕೆ ಪೊಲೀಸರ ಎಂಟ್ರೀ

- Advertisement -G L Acharya panikkar
- Advertisement -
vtv vitla

ಮಂಗಳೂರು: ಬಸ್‌ ತಂಗುದಾಣದಲ್ಲಿ ನಿಂತ ಯುವತಿ ಜತೆ ಯಾರಾದರೂ ಅಶ್ಲೀಲವಾಗಿ ವರ್ತಿಸಿ ಕೀಟಲೆ ಮಾಡಿದರೆ, ದುಷ್ಕರ್ಮಿಗಳು ದಾಳಿ ಮಾಡಿದರೆ ಈ ಬಸ್‌ ತಂಗುದಾಣದಲ್ಲಿದ್ದ ಸೈರನ್‌ ಕರ್ಕಶ ಸದ್ದು ಮಾಡುತ್ತದೆ. ಕ್ಷಣಾರ್ಧದಲ್ಲೇ ಆ ಸ್ಥಳಕ್ಕೆ ಸ್ಥಳೀಯ ಪೊಲೀಸರು ಅಥವಾ ತುರ್ತು ನಿಗಾ ವಾಹನ ಧಾವಿಸಿ ಬರಲಿದೆ. ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ಸುರತ್ಕಲ್‌ನಲ್ಲಿಸ್ಮಾರ್ಟ್‌ ಆ್ಯಂಡ್‌ ಡಿಜಿಟಲ್‌ ಸುರತ್ಕಲ್‌ ಯೋಜನೆಯಡಿಯಲ್ಲಿ ರಾಜ್ಯದಲ್ಲೇ ಪ್ರಪ್ರಥಮ ಸುಸಜ್ಜಿತ ಹೈಟೆಕ್‌ ಬಸ್‌ ನಿಲ್ದಾಣವನ್ನು ನಿರ್ಮಿಸಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ಸುರತ್ಕಲ್‌ ಗೋವಿಂದದಾಸ್‌ ಕಾಲೇಜು ಮುಂಭಾಗದಲ್ಲಿ ಈ ಬಸ್‌ ತಂಗುದಾಣವಿದ್ದು, ಯುವತಿ, ಮಹಿಳೆಯರಿಗೆ ಏನಾದರೂ ತೊಂದರೆಯಾದರೆ ಬಸ್‌ ತಂಗುದಾಣದಲ್ಲಿರುವ ಸ್ವಿಚ್‌ (ಎಸ್‌ಒಎಸ್‌ ಬಟನ್‌) ವೊಂದನ್ನು ಹಾಕಬೇಕು. ಕೂಡಲೇ ಸಮೀಪದ ಸುರತ್ಕಲ್‌ ಪೊಲೀಸ್‌ ಠಾಣೆ, ಠಾಣೆ ಇನ್‌ಸ್ಪೆಕ್ಟರ್‌, ಪೊಲೀಸ್‌ ಕಮಿಷನರ್‌, ಕಾನೂನು ಸುವ್ಯವಸ್ಥಾ ವಿಭಾಗದ ಡಿಸಿಪಿ, 112 ಕಂಟ್ರೋಲ್‌ ರೂಮ್‌ಗೆ ಸಂದೇಶ ರವಾನೆಯಾಗುತ್ತದೆ.

ಅಧಿಕಾರಿಗಳು ಕೂಡಲೇ ಮೊಬೈಲ್‌ ಮೂಲಕ ಬಸ್‌ ತಂಗುದಾಣದಲ್ಲಿರುವ ಸಿಸಿ ಕ್ಯಾಮೆರಾದ ಸಹಾಯ ಪಡೆದು ಆ ಸ್ಥಳದಲ್ಲಿಏನು ನಡೆಯುತ್ತಿದೆ ಎಂಬುವುದನ್ನು ನೇರವಾಗಿ ವೀಕ್ಷಣೆ ಮಾಡಲು ಸಾಧ್ಯವಿದೆ. ಸ್ಥಳೀಯ ಠಾಣೆ ಇನ್‌ಸ್ಪೆಕ್ಟರ್‌ ಬಂದು ಸೈರನ್‌ ಬಂದ್‌ ಮಾಡುವ ತನಕ ಸೈರನ್‌ ಮೊಳಗುತ್ತಲೇ ಇರುತ್ತದೆ.

ಅಧಿಕಾರಿಗಳು ಕೂಡಲೇ ಮೊಬೈಲ್‌ ಮೂಲಕ ಬಸ್‌ ತಂಗುದಾಣದಲ್ಲಿರುವ ಸಿಸಿ ಕ್ಯಾಮೆರಾದ ಸಹಾಯ ಪಡೆದು ಆ ಸ್ಥಳದಲ್ಲಿ ಏನು ನಡೆಯುತ್ತಿದೆ ಎಂಬುವುದನ್ನು ನೇರವಾಗಿ ವೀಕ್ಷಣೆ ಮಾಡಲು ಸಾಧ್ಯವಿದೆ. ಸ್ಥಳೀಯ ಠಾಣೆ ಇನ್‌ಸ್ಪೆಕ್ಟರ್‌ ಬಂದು ಸೈರನ್‌ ಬಂದ್‌ ಮಾಡುವ ತನಕ ಸೈರನ್‌ ಮೊಳಗುತ್ತಲೇ ಇರುತ್ತದೆ.ಈ ಹೈಟೆಕ್ ಬಸ್ ಸ್ಟ್ಯಾಂಡ್ ಅನ್ನು ರಾಜ್ಯದೆಲ್ಲೆಡೆ ವಿಸ್ತರಿಸಿದರೆ ರಾಜ್ಯದೆಲ್ಲೆಡೆಯಿರುವ ಮಹಿಳೆಯರಿಗೆ ಅನುಕೂಲವಾದೀತು.

- Advertisement -

Related news

error: Content is protected !!