Sunday, May 5, 2024
spot_imgspot_img
spot_imgspot_img

ಬಸ್- ಲಾರಿ ಭೀಕರ ಅಪಘಾತ ; ಪ್ರಯಾಣಿಕರು ಸಜೀವ ದಹನ

- Advertisement -G L Acharya panikkar
- Advertisement -
vtv vitla

ಕಲಬುರಗಿ: ಬಸ್ ಮತ್ತು ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿ ಬಸ್ ಗೆ ಬೆಂಕಿ ಹತ್ತಿಕೊಂಡಿದ್ದು, ಹಲವರು ಸಜೀವ ದಹನವಾದ ಘಟನೆ ಕಲಬುರಗಿ ಜಿಲ್ಲೆಯ ಚಾರ್ ಕಮಾನ್ ಬಳಿ ಇಂದು ಬೆಳಗಿನ ಜಾವ ಸಂಭವಿಸಿದೆ. ಏಳು ಜನ ಬಸ್ ನೊಳಗೆ ಸಿಲುಕಿ, ಸಜೀವ ದಹನವಾದ ಶಂಕೆ ಇದೆ.

ತೆಲಂಗಾಣದ ಹೈದರಬಾದ್ ನಿಂದ ಗೋವಾಕ್ಕೆ ಮೂರು ಕುಟುಂಬಗಳ 29 ಜನ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿಂದ ಮರಳುವಾಗ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 22 ಜನರು ಬಸ್ ನಿಂದ ಜಿಗಿದು ಪಾರಾಗಿದ್ದಾರೆ. ಲಾರಿ ಚಾಲಕನ ಎರಡೂ ಕಾಲುಗಳು ತುಂಡಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದಲ್ಲಿ ಗಾಯಗೊಂಡವರನ್ನು ಕಲಬುರಗಿಯ ವಿವಿಧ ಆಸ್ಪತ್ರೆ ಗಳಲ್ಲಿ ದಾಖಲಿಸಲಾಗಿದೆ. ಹಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು , ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಗೊಂಡವರು ಹೈದರಾಬಾದ್ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ.

vtv vitla
vtv vitla
- Advertisement -

Related news

error: Content is protected !!