Friday, April 26, 2024
spot_imgspot_img
spot_imgspot_img

ಬಾಯಾರು: ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ 4 ನೇ ವರ್ಷದ ವಾರ್ಷಿಕೊತ್ಸವ – ಚಂಡಿಕಾಹವನ ಮತ್ತು ಧರ್ಮನೇಮೋತ್ಸವ

- Advertisement -G L Acharya panikkar
- Advertisement -

ದುರ್ಗಾವನ, ಹಿರಣ್ಯ ಬಾಯಾರು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಶ್ರೀ| ವೇ| ಮೂ| ಪರಕ್ಕಜೆ ಅನಂತ ನಾರಾಯಣ ಭಟ್ಟರ ಆಚಾರ್ಯತ್ವದಲ್ಲಿ 4 ನೇ ವರ್ಷದ ವಾರ್ಷಿಕೊತ್ಸವ ಮತ್ತು ಚಂಡಿಕಾಹವನ ಏ. ೧೧ ರಂದು ನಡೆಯಲಿದೆ. ಬಾಯಾರು ಹಿರಣ್ಯ ಕಂಬಳಗದ್ದೆ ಮತ್ತು ತರವಾಡು ಮನೆಯಲ್ಲಿ 13-04-2022 ನೇ ಬುಧವಾರ ಮತ್ತು 14-04-2022 ನೇ ಗುರುವಾರ ಶ್ರೀ ಮೈಸಂದಾಯಾದಿ ಪರಿವಾರ ದೈವಗಳಿಗೆ ಮತ್ತು ಧರ್ಮದೈವಗಳ ಧರ್ಮನೇಮೋತ್ಸವ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಎಪ್ರಿಲ್ 8, ಶುಕ್ರವಾರದಂದು ಶ್ರೀ ದುರ್ಗಾಪರಮೇಶ್ವರಿ ದೇವಿಯ ಮತ್ತು ನಾಗ ದೇವರ ವಾರ್ಷಿಕೋತ್ಸವದ ಪ್ರಯುಕ್ತ ನಾಗಬನದಲ್ಲಿ ನಾಗತಂಬಿಲ, ಮತ್ತು ದೇವಿ ಕ್ಷೇತ್ರದಲ್ಲಿ ಬೆಳಗ್ಗೆ ಗಣಪತಿಹವನ, ಪಂಚವಿಂಶತಿ ಕಲಶಾಭಿಷೇಕ, ಮತ್ತು ಚಂಡಿಕಾಹೋಮ, ಮಧ್ಯಾಹ್ನ ಸಭಾಕಾರ್ಯಕ್ರಮ, ಧಾರ್ಮಿಕ ಪ್ರವಚನ, ಅನ್ನ ಸಂತರ್ಪಣೆ, ನಡೆಯಲಿದೆ. ಸಂಜೆ ದುರ್ಗಾ ಶಪ್ತಶತಿ ಪಾರಾಯಣ, ಸಂಜೆ 6 ರಿಂದ 8 ರವರೆಗೆ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಭಜನೆ, ದುರ್ಗಾಪೂಜೆ, ಹಾಗೂ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6.30 ರಿಂದ ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಸಾರಥ್ಯದಲ್ಲಿ ಶ್ರೀ ದೇವಿ ಮಹಾತ್ಮೆ ಕಥಾಭಾಗದ ಯಕ್ಷಗಾನ ಬಯಲಾಟ ನಡೆಯಲಿದೆ.

12-04-2022 ನೇ ಮಂಗಳವಾರ ತರವಾಡು ಮನೆಯಲ್ಲಿ 12 ಕಾಯಿ ಗಣಪತಿ ಹವನ, ದೈವಗಳಿಗೆ ಚೈತನ್ಯ ಕಲಶಭಿಷೇಕ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ತರವಾಡು ಮನೆಯಲ್ಲಿ ವೆಂಕಟರಮಣ ಸ್ವಾಮಿಯ ಮುಡಿಪು ಕಟ್ಟುವ ಕಾರ್ಯಕ್ರಮ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.

13-04-2022 ರಂದು ಬೆಳಿಗ್ಗೆ 7.30 ರಿಂದ ಮೈಸಂದಾಯಾದಿ ಪರಿವಾರ ದೈವಗಳ ತಂಬಿಲ ಸೇವೆ 8.30 ರ ನಂತರ ತರವಾಡು ಮನೆಗೆ ಭಂಡಾರ ಹೊರಡುವುದು. 10 ಗಂಟೆಗೆ ತರವಾಡು ಮನೆಯಲ್ಲಿ ಮಲರಾಯ ದೈವಕ್ಕೆ ನೇಮೋತ್ಸವ | ಗಂಟೆಗೆ ಅನ್ನದಾನ ಮಧ್ಯಾಹ್ನ 3 ರಿಂದ ಧೂಮಾವತಿ ದೈವಕ್ಕೆ ನೇಮೋತ್ಸವ ಮತ್ತು ರಾತ್ರಿ ಗಂಟೆ 7 ರಿಂದ 9 ರವರೆಗೆ ಮೈಸಂದಾಯಾದಿ ದೈವಕ್ಕೆ ನೇಮೋತ್ಸವ ಅನ್ನದಾನ

ರಾತ್ರಿ 10 ರಿಂದ 11.30 ರವರೆಗೆ ಪಿಲಿಚಾಮುಂಡಿ ದೈವಕ್ಕೆ ನೇಮೋತ್ಸವ 11.30 ರಿಂದ ರಕ್ರೇಶ್ವರಿ ದೈವಕ್ಕೆ ನೇಮೋತ್ಸವ ನಂತರ ಮೈಸಂದಾಯಾದಿ ಪರಿವಾರ ದೈವಗಳ ಸನ್ನಿಧಿಗೆ ಭಂಡಾರ ಹೊರಡುವುದು ಮತ್ತು ತಂಬಿಲ ಸೇವೆ ನಡೆಯಲಿದೆ.

14-04-2022 ರಂದು ಬೆಳಿಗ್ಗೆ ದೇವಿ ಸನ್ನಿಧಿಯಲ್ಲಿ ಸಂಕ್ರಮಣ ಪ್ರಯುಕ್ತ ಕಲಾಭಿಷೇಕ ಮಧ್ಯಾಹ್ನ ಮಹಾಪೂಜೆ 2.30 ರಿಂದ 4.30 ರವರೆಗೆ ಸ್ಥಳದ ವರ್ಣರ ಪಂಜುರ್ಲಿಗೆ ಕೋಲ 5.00 ಕ್ಕೆ ತರವಾಡು ಮನೆಯಲ್ಲಿ ತಂಬಿಲ, 6 ರಿಂದ 8 ರವರೆಗೆ ದೇವಸ್ಥಾನದಲ್ಲಿ ಭಜನೆ ಹಾಗೂ ದುರ್ಗಾಪೂಜೆ ಅನ್ನದಾನ 9.30 ರಿಂದ 11 ರವರೆಗೆ ತರವಾಡು ಮನೆಯ ಕೊರತಿ ದೈವಕ್ಕೆ ಕೋಲ 11 ರಿಂದ ಧರ್ಮದೈವ ಕುಪ್ಪೆಪಂಜುರ್ಲಿ ಮತ್ತು ಕಲ್ಲುರ್ಟಿ ದೈವಕ್ಕೆ ಕೋಲ 1.30 ರಿಂದ 3 ರ ತನಕ ಗುಳಿಗನಿಗೆ ಕೋಲ ಜರುಗಲಿದೆ.

15-04-2022 ನೇ ಶುಕ್ರವಾರ ಮಧ್ಯಾಹ್ನ 2.30 ರಿಂದ ತರವಾಡು ಮನೆಯ ದೈವಗಳಿಗೆ ಕುರಿತಂಬಿಲ (ಆಗೇಲು ಸೇವೆ) ನಡೆಯಲಿದೆ.

vtv vitla
- Advertisement -

Related news

error: Content is protected !!