Tuesday, June 23, 2026
spot_imgspot_img
spot_imgspot_img

ಬಾಯ್​​​ಫ್ರೆಂಡ್​​​ನೊಂದಿಗೆ ಹಾಲಿಡೇ ಟ್ರಿಪ್​ ಹೊರಟಿದ್ದ ಯುವ ನಟಿ ಕಾರು ಅಪಘಾತದಲ್ಲಿ ಸಾವು

- Advertisement -
- Advertisement -

ಪ್ರಿಯಕರನೊಂದಿಗೆ ಹಾಲಿ ಡೇ ಟ್ರಿಪ್​ಗೆ ಹೊರಟ್ಟಿದ್ದ ಮರಾಠಿ ನಟಿ ಈಶ್ವರಿ ದೇಶಪಾಂಡೆ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಸಿನಿಮಾ ರಂಗದಲ್ಲಿ ಒಂದಾರ ಹಿಂದೊಂದರಂತೆ ದುರಂತಗಳು ನಡೆಯುತ್ತಿದ್ದು, ಕಳೆದ ಮಂಗಳವಾರ ಪ್ರಮುಖ ಪಬ್ಲಿಸಿಟಿ ಡಿಸೈನರ್​​​ ಈಶ್ವರ್​​ ಸಾವಿನ ದುರ್ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ನಡೆದಿದೆ. ಪ್ರಮುಖ ನಟಿ ಈಶ್ವರಿ ದೇಶಪಾಂಡೆ ಕಾರು ಅಪಘಾತದಲ್ಲಿ ಇಂದು ಸಾವನ್ನಪ್ಪಿದ್ದಾರೆ.

ಪೊಲೀಸರು ನೀಡಿರೋ ಮಾಹಿತಿ ಅನ್ವಯ ಸೆ.15 ರಂದು ಗೆಳೆಯನೊಂದಿಗೆ 25 ವರ್ಷದ ಈಶ್ವರಿ ದೇಶಪಾಂಡೆ ಗೋವಾ ಟ್ರಿಪ್​​ಗೆ ತೆರಳಿದ್ದರು. ಇಬ್ಬರು ಪ್ರಯಾಣಿಸುತ್ತಿದ್ದ ಕಾರು ಗೋವಾ ಸಮೀಪದ ಕಲಾಂಗುಟ್​​ ಬಳಿ ನಿಯಂತ್ರಣ ತಪ್ಪಿ ಕಾಲುವೆಗೆ ಜಾರಿ ಬಿದ್ದಿದೆ. ಈ ವೇಳೆ ಕಾರು ಸೆಂಟ್ರಲ್​ ಲಾಕ್​​ ಆಗಿದ್ದ ಕಾರಣ ಕಾರಿನಿಂದ ಹೊರ ಬರಲಾಗದೆ ಸಾವನ್ನಪ್ಪಿದ್ದು, ಘಟನೆ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ನಟಿಯೊಂದಿಗೆ ಇದ್ದ ಆಕೆಯ ಪ್ರಿಯಕರ 28 ವರ್ಷದ ಶುಭಮ್​ ಕೂಡ ಸಾವನ್ನಪ್ಪಿದ್ದಾರೆ.

ಚಿಕ್ಕ ವಯಸ್ಸಿನಿಂದಲೂ ನಟನೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಈಶ್ವರಿ, ಹಿಂದಿ ಮತ್ತು ಮರಾಠಿ ಸಿನಿಮಾಗಳಲ್ಲಿ ನಟಿಸಿದದರು. ಆದರೆ ಇವರು ನಟನೆ ಮಾಡಿರುವ ಸಿನಿಮಾಗಳು ಬಿಡುಗಡೆಯಾಗುವ ಮುನ್ನವೇ ಸಾವನ್ನಪ್ಪಿದ್ದಾರೆ. ಕಳೆದ ಕೆಲ ವರ್ಷಗಳಿಂದ ಈಶ್ವರಿ, ಶುಭಮ್​​ ಡೇಟಿಂಗ್ ಮಾಡುತ್ತಿದ್ದರು. ಇಬ್ಬರು ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಮದುವೆಯಾಗಲು ಸಿದ್ಧತೆ ಕೂಡ ನಡೆಸಿದ್ದರು. ಆದರೆ ಈ ನಡುವೆ ಯುವ ಜೋಡಿ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದು, ಸಿನಿರಂಗದ ಹಲವು ಗಣ್ಯರು ಇಬ್ಬರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

- Advertisement -

Related news

error: Content is protected !!