Monday, July 20, 2026
spot_imgspot_img
spot_imgspot_img

ಬಾಹುಬಲಿ ಖ್ಯಾತಿಯ ಅನುಷ್ಕಾ ಶೆಟ್ಟಿಗೆ ಹುಟ್ಟು ಹಬ್ಬದ ಸಂಭ್ರಮ

- Advertisement -
- Advertisement -

ತುಳುನಾಡಿನ ಬೆಡಗಿ, ಪುತ್ತೂರಿನ ಪ್ರತಿಷ್ಠಿತ ಬೆಳ್ಳಿಪ್ಪಾಡಿ ಮನೆತನದ, ಬಾಹುಬಲಿ ಖ್ಯಾತಿಯ ಅನುಷ್ಕಾ ಶೆಟ್ಟಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ತನ್ನ ಮನೋಜ್ಞ ಅಭಿನಯದ ಮೂಲಕ ಮನೆ ಮಾತಾದ ಕನ್ನಡದ ಚೆಲುವೆ ಇಂದು ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ. ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವಲ್ಲಿ ಸಖತ್ ಚ್ಯೂಸಿ ಆಗಿರುವ ಸ್ವೀಟಿ ಮೇಲೆ ಫ್ಯಾನ್ಸ್ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿ ರುವುದಂತೂ ಸುಳ್ಳಲ್ಲ..!

ಅರುಂಧತಿ, ಬಾಹುಬಲಿ, ವೇದಂ, ಸಿಂಗಂ, ರುದ್ರಮದೇವಿ ಹೀಗೆ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ ಸ್ವೀಟಿಗೆ ಗಣ್ಯಾತಿಗಣ್ಯರು ಸೇರಿದಂತೆ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. 2020ರಲ್ಲಿ ನೇರವಾಗಿ ಅಮೇಜಾನ್ ಪ್ರೈಂ ವಿಡಿಯೋ ಮೂಲಕ ತೆರೆಕಂಡ ನಿಶಬ್ದಂ ಸಿನಿಮಾ ಬಳಿಕ ಅನುಷ್ಕಾ ಬೇರೆ ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಇಂದು ಅವರ ಹುಟ್ಟುಹಬ್ಬದ ಪ್ರಯುಕ್ತ ಹೊಸ ಪ್ರಾಜೆಕ್ಟ್ ಗಳ ಬಗ್ಗೆ ಅಪ್‌ಡೇಟ್ ಸಿಗುವ ನಿರೀಕ್ಷೆ ಇದೆ.

ಕನ್ನಡದಲ್ಲಿಯೂ ಸಿನೆಮಾ ಮಾಡಲಿ..!
ಅನುಷ್ಕಾ ಶೆಟ್ಟಿ ಅಪ್ಪಟ ಕನ್ನಡತಿ. ತುಂಬ ಸ್ಪಷ್ಟವಾಗಿ ಅವರು ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ವಿಶೇಷ ದಿನಗಳಲ್ಲಿ ಕನ್ನಡದಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾರೆ. ಆದರೆ ಈವರೆಗೂ ಅವರು ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ ಎಂಬ ಕೊರಗು ಅಭಿಮಾನಿಗಳಿಗೆ ಇದೆ. ಆದಷ್ಟು ಬೇಗ ಅವರು ಕನ್ನಡದ ಚಿತ್ರದಲ್ಲಿ ನಟಿಸಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ.

- Advertisement -

Related news

error: Content is protected !!