Sunday, May 19, 2024
spot_imgspot_img
spot_imgspot_img

ಬಿಜೆಪಿ ಕಿಸಾನ್ ಮೋರ್ಚಾದ ಅಧ್ಯಕ್ಷ ಮತ್ತು ಪತ್ನಿಯ ಭೀಕರ ಕಗ್ಗೊಲೆ

- Advertisement -G L Acharya panikkar
- Advertisement -

ಜಮ್ಮು-ಕಾಶ್ಮೀರದಲ್ಲಿ ಉಗ್ರರು ಪೈಶಾಚಿಕ ಕೃತ್ಯ ಮೆರೆದಿದ್ದು, ದಂಪತಿ ಮೇಲೆ ಫೈರಿಂಗ್ ನಡೆಸಿ ಹತ್ಯೆಗೈದು ಎಸ್ಕೇಪ್ ಆಗಿದ್ದಾರೆ.

ಅನಂತ್​ನಾಗ್ ಜಿಲ್ಲೆಯ ಲಾಲ್​ಚೌಕ್​​ನಲ್ಲಿದ್ದ ದಂಪತಿ ಮೇಲೆ ಮನಬಂದಂತೆ ಗುಂಡಿನ ಸುರಿಮಳೆಗೈದಿದ್ದಾರೆ. ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ಕುಲ್ಗಂನ ಬಿಜೆಪಿ ಕಿಸಾನ್ ಮೋರ್ಚಾದ ಅಧ್ಯಕ್ಷ ಗುಲಾಂ ರಸೂಲ್ ದರ್​ ಹಾಗೂ ಇವರ ಪತ್ನಿ ಮೇಲೆ ಉಗ್ರರು ದಾಳಿ ನಡೆಸಿ ಎಸ್ಕೇಪ್ ಆಗಿದ್ದಾರೆ.

ಉಗ್ರರ ಗುಂಡೇಟಿಗೆ ದಂಪತಿ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

- Advertisement -

Related news

error: Content is protected !!