Saturday, May 18, 2024
spot_imgspot_img
spot_imgspot_img

ಬಿಜೆಪಿ ಮುಖಂಡನ ಹನಿಟ್ರ್ಯಾಪ್; ಎಫ್ಐಆರ್ ದಾಖಲು!

- Advertisement -G L Acharya panikkar
- Advertisement -

ಬೆಂಗಳೂರು: ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ, ಡಾ.ಅಂಬೇಡ್ಕರ್ ಫೌಂಡೇಷನ್‌ ನಿರ್ದೇಶಕ ಚಿ.ನಾ.ರಾಮು ದೂರು ದಾಖಲಿಸಿದ್ದಾರೆ. ಫೇಸ್‌ಬುಕ್‌ ಮೆಸೆಂಜರ್‌ ಮೂಲಕ ಪರಿಚಯವಾಗಿದ್ದ ಮಹಿಳೆ ಮೊಬೈಲ್ ನಂಬರ್ ಪಡೆದು ವಿಡಿಯೋ ಕಾಲ್ ಮಾಡಿದ್ದಳು.

ವಿಡಿಯೋ ಕಾಲ್‌ನಲ್ಲಿ ಅಸಭ್ಯವಾಗಿ ವರ್ತಿಸಿದ್ದಳು. ಬಳಿಕ ಅಪರಿಚಿತ ವ್ಯಕ್ತಿ ಕರೆ ಮಾಡಿ ಹಣ ನೀಡುವಂತೆ ಬೆದರಿಕೆ ಒಡ್ಡುತ್ತಿದ್ದಾನೆ. ‘ಯುವತಿಯೊಂದಿಗೆ ನಗ್ನವಾಗಿರುವ ವಿಡಿಯೋ ನನ್ನ ಬಳಿ ಇದೆ. ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ’ ಎಂದು ಬೆಂಗಳೂರು ಸೆಂಟ್ರಲ್ ಸಿಇಎನ್ ಠಾಣೆಗೆ ಬಿಜೆಪಿ ಮುಖಂಡ ಚಿ.ನಾ.ರಾಮು ದೂರು ದಾಖಲಿಸಿದ್ದಾರೆ.

ಬೆದರಿಕೆಗೆ ಹೆದರಿ ಬಿಜೆಪಿ ಮುಖಂಡ ಚಿ.ನಾ.ರಾಮು ಈಗಾಗಲೇ ಅಪರಿಚಿತನ ಖಾತೆಗೆ 31,500 ಹಣವನ್ನು ಹಾಕಿದ್ದಾರೆ . ಚಿ.ನಾ.ರಾಮು ನೀಡಿರುವ ದೂರು ಆಧರಿಸಿ ಎಫ್ಐಆರ್ ದಾಖಲಾಗಿದೆ.

driving
- Advertisement -

Related news

error: Content is protected !!