Saturday, April 27, 2024
spot_imgspot_img
spot_imgspot_img

ಉಳ್ಳಾಲ: ಬೈಕ್ ಅಪಘಾತ; ಮಹಿಳೆ ಮೃತ್ಯು,ಸವಾರ ಗಂಭೀರ..!

- Advertisement -G L Acharya panikkar
- Advertisement -

ಉಳ್ಳಾಲ: ಬೈಕ್ ಅಪಘಾತ ಸಂಭವಿಸಿ ಸಹಸವಾರೆ ವಿವಾಹಿತ ಮಹಿಳೆಸಾವನ್ನಪ್ಪಿ, ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಉಳ್ಳಾಲದ ನಾಟೆಕಲ್ ಸಮೀಪ ನಡೆದಿದೆ.

ಮೃತಪಟ್ಟ ಮಹಿಳೆ ಮಂಗಳೂರು ನಗರದ ಬೋಂದೇಲ್ ನಿವಾಸಿ ಶ್ರೀನಿಧಿ (29) ಸವಾರ ಯತೀಶ್ ದೇವಾಡಿಗ ಎಂದು ಗುರುತಿಸಲಾಗಿದೆ.

ಸವಾರ ಯತೀಶ್ ದೇವಾಡಿಗ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಡಿಪುವಿನಲ್ಲಿನ ಸಂಬಂಧಿಕರ ಗೃಹಪ್ರವೇಶಕ್ಕೆ ತೆರಳಿ ವಾಪಸ್ಸಾಗುವ ಸಂದರ್ಭ ಬೈಕ್, ಸವಾರನ ನಿಯಂತ್ರಣ ತಪ್ಪಿ ನಾಟೆಕಲ್ ಗ್ರೀನ್ ಗ್ರೌಂಡ್ ಸಮೀಪ ಡಿವೈಡರ್ ಗೆ ಬಡಿದು ಈ ದುರ್ಘಟನೆ ನಡೆದಿದೆ. ಇನ್ನು ಮೃತ ಶ್ರೀನಿಧಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರೆ, ಯತೀಶ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!