Thursday, May 2, 2024
spot_imgspot_img
spot_imgspot_img

ಬಿ.ಸಿ ರೋಡ್‌ ನಿವಾಸಿ, ವೆಲ್ಡರ್ ಶಾಪ್ ಮಾಲೀಕ ಕಟ್ಟಡದಿಂದ ಬಿದ್ದು ಮೃತ್ಯು

- Advertisement -G L Acharya panikkar
- Advertisement -

ವೆಲ್ಡಿಂಗ್ ಶಾಪ್ ನ ಮಾಲಕ ಕಟ್ಟಡದಿಂದ ಬಿದ್ದು ಅಸುನೀಗಿದ ಘಟನೆ ಕಯ್ಯಾರ್ ಸಮೀಪದ ಮಂಡೆಕಾಪು ಎಂಬಲ್ಲಿ ನಡೆದಿದೆ. ಬಿ. ಸಿ ರೋಡ್ ಚಾಕೆತ್ತಡಿಯ ಸಂದೀಪ್ ಶೆಟ್ಟಿ(35) ಮೃತಪಟ್ಟ ದುರ್ದೈವಿ.

ಸಂದೀಪ್ ಶೆಟ್ಟಿ ಮನೆಯೊಂದರ 2ನೇ ಮಹಡಿಗೆ ಶೀಟ್ ಅಳವಡಿಸಲು ಅಳತೆ ತೆಗೆಯಲು ಹತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಜಾರಿ ಕೆಲ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಸಂದೀಪ್ ಶೆಟ್ಟಿ ರವರನ್ನು ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಳಿಲ್ಲ. ಮೃತದೇಹವನ್ನು ಮಂಗಲ್ಪಾಡಿಯಲ್ಲಿರುವ ತಾಲೂಕು ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!