Thursday, August 6, 2026
spot_imgspot_img
spot_imgspot_img

ಬೆಂಗಳೂರಿನಲ್ಲಿ ಶಂಕಿತ ಉಗ್ರ ತಾಲಿಬ್ ಹುಸೇನ್ ಬಂಧನ

- Advertisement -
- Advertisement -
vtv vitla

ಬೆಂಗಳೂರು : ಹೆಸರು ಬದಲಾಯಿಸಿಕೊಂಡು ಸಿಲಿಕಾನ್ ಸಿಟಿಯ ಓಡಾಡುತ್ತಿದ್ದ ಶಂಕಿತ ಉಗ್ರನೊಬ್ಬನನ್ನು ಜಮ್ಮು ಕಾಶ್ಮೀರ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ತಾಲಿಬ್ ಹುಸೇನ್ (38) ಬೆಂಗಳೂರಿನಲ್ಲಿ ತಾರಿಕ್ ಎಂದು ಹೆಸರು ಬದಲಾಯಿಸಿಕೊಂಡು ಓಡಾಡುತ್ತಿದ್ದ.ಈತ ಬಿಎನ್ಎಲ್ ಏರ್ ಸರ್ವಿಸ್ ನಲ್ಲಿ ಕೆಲಸ ಮಾಡುತ್ತಿದ್ದು, ಕಾಶ್ಮೀರದಿಂದ ಪೊಲೀಸೊಬ್ಬರ ಪತ್ನಿಯನ್ನೇ ಪ್ರೀತಿಸಿ ಈತ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದನು. ಪತ್ನಿ ಮತ್ತು ಮಕ್ಕಳ ಜತೆಗೆ ವಾಸವಿದ್ದ ತಾಲಿಬ್‌ ನ ಕುಟುಂಬ ಕಷ್ಟವನ್ನು ನೋಡಿ ಓಕುಳಿಪುರಂ ಮಸೀದಿ ಮುಖ್ಯಸ್ಥ ಅನ್ಸರ್ ಪಾಷ ಆಶ್ರಯ ನೀಡಿದ್ದರು. ಅಷ್ಟೇ ಅಲ್ಲದೆ ಅಲ್ಲಿನ ಮಸೀದಿಯಲ್ಲಿ ಪಾಠ ಪ್ರವಚನ ಮಾಡುತ್ತಿದ್ದ ಶಂಕೆಯೂ ವ್ಯಕ್ತವಾಗಿದೆ.

ಸದ್ಯ ತಾಲಿಬ್ ನನ್ನು ಬಂಧಿಸಿರುವ CRPF ಯೋಧರು ಆತನನ್ನು ಕಾಶ್ಮೀರಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ ಇಂತಹ ಶಂಕಿತರ ಮೇಲೆ ಪೊಲೀಸ್ ಇಲಾಖೆ ನಿರಂತರ ಕಣ್ಣಿಟ್ಟಿರುತ್ತೆ . ನಮ್ಮ ಕೇಂದ್ರ ಸರ್ಕಾರ ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದರು.

- Advertisement -

Related news

error: Content is protected !!