Friday, March 29, 2024
spot_imgspot_img
spot_imgspot_img

ಬೆಂಗಳೂರು : (ಫೆ. 18, 19) ಮಹತೋಭಾರ ಶ್ರೀ ಮಹಾಲಿಂಗೇಶ್ವರ 3ನೇ ಮಹೋತ್ಸವದ ಮಹಾಶಿವರಾತ್ರಿ

- Advertisement -G L Acharya panikkar
- Advertisement -

ಬೆಂಗಳೂರು : ಮಹತೋಭಾರ ಶ್ರೀ ಮಹಾಲಿಂಗೇಶ್ವರ 3ನೇ ಮಹೋತ್ಸವದ ಮಹಾಶಿವರಾತ್ರಿಯು ಫೆ. 18, 19 ರಂದು ಶಿಶು ಗೃಹ, ಪೂರ್ಣಪ್ರಜ್ಞಾ ಸಾರ್ವಜನಿಕ ಆಟದ ಮೈದಾನ, ಹೆಚ್.ಎ.ಎಲ್ 3ನೇ ಹಂತ, ನ್ಯೂ ತಿಪ್ಪಸಂದ್ರ, ಬೆಂಗಳೂರು-75 ಇಲ್ಲಿ ನಡೆಯಲಿದೆ.

ಫೆ. 18ರಂದು ಬೆಳಿಗ್ಗೆ ಮಂಗಳವಾದ್ಯ, ಚಂಡೆ-ತಾಳಗಳೊಂದಿಗೆ ದೇವತಾ ಪ್ರಾರ್ಥನೆ, ಗುರು ಗಣಪತಿ ಪೂಜೆ, ಪಂಚಗವ್ಯ, ಪುಣ್ಯಹವಾಚನ, ಶಿವಲಿಂಗ ಸ್ಥಾಪನೆ, ಪ್ರಾಣ ಪ್ರತಿಷ್ಟಾಪನೆ, ಶತ ರುದ್ರಾಭಿಷೇಕ, ಕಲಶ ಪ್ರತಿಷ್ಠಾಪನೆ, ಬಳಿಕ ಮೆಕಲೆ ಹೋಮದ ಕುಂಡದಲ್ಲಿ ಅರಣಿ ಮಥನದೊಂದಿಗೆ ಅಗ್ನಿ ಜನನ, ಅದೇ ಅಗ್ನಿಯಿಂದ ಗಣಪತಿ ಹೋಮ, ಮತ್ತು ರುದ್ರ ಹೋಮ ಪ್ರಾರಂಭ ಮತ್ತು ಶಿವಲಿಂಗಕ್ಕೆ ಸಹಸ್ರನಾಮ ಬಿಲ್ವಾರ್ಚನೆ, ಮಧ್ಯಾಹ್ನ 12.30 ಕ್ಕೆ ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಸಂಜೆ 4.00 ಕ್ಕೆ ಪಂಚಾಮೃತ ಅಭಿಷೇಕ, ಹರಿದ್ರೋದಕ ಅಭಿಷೇಕ, ಕುಂಕುಮೋದಕ ಅಭಿಷೇಕ, ಭಸ್ಮೋದಕ ಅಭಿಷೇಕ, ಅಕ್ಷದೋದಕ ಅಭಿಷೇಕ, ಪತ್ರೋದಕ ಅಭಿಷೇಕ, ಪುಷ್ಪೋದಕ ಅಭಿಷೇಕ, ರುದ್ರ ಪಾರಾಯಣ ಸಹಿತ ರುದ್ರಾಭಿಷೇಕ, ಸಂಜೆ 5.00 ಕ್ಕೆ ಶ್ರೀ ಮಹಾಲಿಂಗೇಶ್ವರ ದೇವರ ಉತ್ಸವ ಬಲಿ, ಸಂಜೆ 5.30 ಕ್ಕೆ ಅಲಂಕಾರ ಅಷ್ಟಾವಧಾನ ಸೇವೆ, ಮಂಗಳಾರತಿ ತೀರ್ಥಪ್ರಸಾದ ವಿನಿಯೋಗ, ಸಂಜೆ 6.00 ಕ್ಕೆ ಪಾಶುಪಥ ಅಸ್ತ್ರ ಹೋಮ, ಸ್ವಯಂವರ ಪಾರ್ವತಿ ಪೂಜೆ, ರಾತ್ರಿ 9.00 ಕ್ಕೆ ಪ್ರಥಮ ಯಾಮದ ಅಭಿಷೇಕ ಮತ್ತು ಪೂಜೆ, ಪಂಚಾಮೃತ ಅಭಿಷೇಕ, ಹರಿದ್ರೋದಕ ಅಭಿಷೇಕ, ಕುಂಕುಮೋದಕ ಅಭಿಷೇಕ, ಭಸ್ಮೋದಕ ಅಭಿಷೇಕ, ಅಕ್ಷದೋದಕ ಅಭಿಷೇಕ, ಪತ್ರೋದಕ ಅಭಿಷೇಕ, ಪುಷ್ಪೋದಕ ಅಭಿಷೇಕ, ರುದ್ರಪಾರಾಯಣ ಸಹಿತ ರುದ್ರಾಭಿಷೇಕ, ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಮಧ್ಯರಾತ್ರಿ 12.00 ಕ್ಕೆ ದ್ವಿತೀಯ ಯಾಮದ ಅಭಿಷೇಕ ಮತ್ತು ಪೂಜೆ, ಪಂಚಾಮೃತ ಅಭಿಷೇಕ, ಹರಿದ್ರೋದಕ ಅಭಿಷೇಕ, ಕುಂಕುಮೋದಕ ಅಭಿಷೇಕ, ಭಸ್ಮೋದಕ ಅಭಿಷೇಕ, ಅಕ್ಷದೋದಕ ಅಭಿಷೇಕ, ಪತ್ರೋದಕ ಅಭಿಷೇಕ, ಪುಷ್ಪೋದಕ ಅಭಿಷೇಕ, ರುದ್ರಪಾರಾಯಣ ಸಹಿತ ರುದ್ರಾಭಿಷೇಕ, ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.

ದಿನಾಂಕ 19-02-2023 ಬೆಳಗಿನ ಜಾವ 4.00 ಕ್ಕೆ ತೃತೀಯ ಯಾಮದ ಅಭಿಷೇಕ ಮತ್ತು ಪೂಜೆ, ಪಂಚಾಮೃತ ಅಭಿಷೇಕ, ಹರಿದ್ರೋದಕ ಅಭಿಷೇಕ, ಕುಂಕುಮೋದಕ ಅಭಿಷೇಕ, ಭಸ್ಮೋದಕ ಅಭಿಷೇಕ, ಅಕ್ಷದೋದಕ ಅಭಿಷೇಕ, ಪತ್ರೋದಕ ಅಭಿಷೇಕ, ಪುಷ್ಪೋದಕ ಅಭಿಷೇಕ, ರುದ್ರಪಾರಾಯಣ ಸಹಿತ ರುದ್ರಾಭಿಷೇಕ, ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
ಬೆಳಗ್ಗೆ 6.00 ಕ್ಕೆ ಚತುರ್ಥ ಯಾಮದ ಅಭಿಷೇಕ ಮತ್ತು ಪೂಜೆ, ಪಂಚಾಮೃತ ಅಭಿಷೇಕ, ಹರಿದ್ರೋದಕ ಅಭಿಷೇಕ, ಕುಂಕುಮೋದಕ ಅಭಿಷೇಕ, ಭಸ್ಮೋದಕ ಅಭಿಷೇಕ, ಅಕ್ಷದೋದಕ ಅಭಿಷೇಕ, ಪತ್ರೋದಕ ಅಭಿಷೇಕ, ಪುಷ್ಪೋದಕ ಅಭಿಷೇಕ, ರುದ್ರಪಾರಾಯಣ ಸಹಿತ ರುದ್ರಾಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.

ದಿನಾಂಕ : 18-02-2023 ಸಂಜೆ 7:30 ರಿಂದ 9 ರವರೆಗೆ ಖ್ಯಾತ ಹಿನ್ನೆಲೆ ಗಾಯಕರಿಂದ ಭಕ್ತಿ ಗೀತೆಗಳು, ರಾತ್ರಿ 9:30 ರಿಂದ 12:00 ರವರೆಗೆ ನೃತ್ಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮಧ್ಯರಾತ್ರಿ 12:30 ರಿಂದ 5:30 ರವರೆಗೆ ಭಜನೆ ಮತ್ತು ಭಕ್ತಿ ಗೀತೆಗಳು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!