Sunday, June 14, 2026
spot_imgspot_img
spot_imgspot_img

ಬೆಳ್ತಂಗಡಿ : ಅಕ್ರಮ ಗಾಂಜಾ ಮಾರಾಟ; ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ

- Advertisement -
- Advertisement -

ಬೆಳ್ತಂಗಡಿ : ಕುವೆಟ್ಟು ಗ್ರಾಮದ ಗುರುವಾಯನಕೆರೆಯ ಸರಕಾರಿ ಪ್ರೌಢಶಾಲೆಯ ಬಳಿ ಗಾಂಜಾ ಸೇವಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಎ.26ರಂದು ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಗುರುವಾಯನಕೆರೆ ಸರ್ಕಾರಿ ಪ್ರೌಡ ಶಾಲೆಯ ಹತ್ತಿರ ಎಸ್.ಐ. ಹರೀಶ್ ಎಮ್.ಆರ್. ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಕುವೆಟ್ಟು ಗ್ರಾಮದ ಮನ್ಸೂರ್ ಎಂಬವರ ಮಗ ಖೈಸ್, ಇಂತಿಯಾಜ್ ಎಂಬವರ ಮಗ ಮೊಹಮ್ಮದ್ ಅಶ್ರಫ್ ಎಂಬವರನ್ನು ಬಂಧಿಸಿ ಹತ್ತು ಸಾವಿರ ರೂ ಮೌಲ್ಯದ 294 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

- Advertisement -

Related news

error: Content is protected !!