- Advertisement -
- Advertisement -


ಬೆಳ್ತಂಗಡಿ: ತಾಲೂಕಿನ ನಾವೂರು ಗ್ರಾಮದ ಅಬ್ಬನ್ ಕೆರೆ ಎಂಬಲ್ಲಿ ಪತ್ನಿಯೇ ಪತಿಯನ್ನು ಹತ್ಯೆಗೈದಿರುವ ಘಟನೆ ಮಂಗಳವಾರ (ಜು.5) ನಡೆದಿದೆ.
ನಾವೂರು ಗ್ರಾಮದ ಅರಣ್ಯ ಪ್ರವಾಸಿ ಮಂದಿರ ಬಳಿಯ ಅಬ್ಬನ್ ಕೆರೆ ಬಳಿ ದಂಪತಿಗಳು ವಾಸವಿದ್ದರು. ಬೇಬಿ(60) ಕೊಲೆಯಾದ ದುರ್ದೈವಿ. ಪತ್ನಿ ನೆಲ್ಲಮ್ಮ(55) ಆರೋಪಿ. ಕೊಲೆಯಾದ ಬಳಿಕ ಪತಿ ಬಳಿ ಪತ್ನಿ ಕತ್ತಿ ಹಿಡಿದು ಕುಳಿತಿದ್ದರು.

ಕೃಷಿಕ ದಂಪತಿಯಾಗಿರುವ ಇವರಿಗೆ ಮೂವರು ಮಕ್ಕಳಿದ್ದು, ಪುತ್ರಿಗೆ ವಿವಾಹವಾಗಿದ್ದು, ಓರ್ವ ಪುತ್ರ ವಿದೇಶದಲ್ಲಿ, ಮತ್ತೋರ್ವ ಪುತ್ರ ಬೇರೆಡೆ ವಾಸವಾಗಿದ್ದಾರೆ. ಮನೆಯಲ್ಲಿ ಇಬ್ಬರೇ ಇದ್ದರು ಎಂದು ತಿಳಿದುಬಂದಿದೆ.
ಪತ್ನಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಯಾವುದೋ ಕಾರಣಕ್ಕೆ ಪತಿಯನ್ನು ಕೊಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- ವಿಟ್ಲ: ಕಾರಿನಲ್ಲಿ ಗಾಂಜಾ ತಂದು ಸೇವನೆ ಆರೋಪ; ನಾಲ್ವರ ವಿರುದ್ಧ ಪ್ರಕರಣ ದಾಖಲು
- ಮದರಂಗಡಿ ಡೇವಿಡ್ ಡಿಸೋಜ ಶೂಟೌಟ್ ಪ್ರಕರಣ: ಬಂಧಿತರು 10 ದಿನ ಪೊಲೀಸ್ ಕಸ್ಟಡಿಗೆ
- NRC ಗುರುತಿನ ಚೀಟಿ ನೀಡುವಂತೆ ಅರ್ಜಿ: ಕೇಂದ್ರ, ಅಸ್ಸಾಂ ಸರಕಾರಕ್ಕೆ ಉತ್ತರಿಸಲು ಸುಪ್ರೀಂ ಸೂಚನೆ
- ತೊಕ್ಕೊಟ್ಟು: ತಲವಾರು ಬೀಸಿ ಬೆದರಿಕೆ ಆರೋಪ: ರೌಡಿಶೀಟರ್ ಸೇರಿ ಇಬ್ಬರು ಬಂಧನ
- ಬೆಳ್ತಂಗಡಿ: ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವನೆ – ವ್ಯಕ್ತಿಯ ವಿರುದ್ಧ ಎನ್ಡಿಪಿಎಸ್ ಪ್ರಕರಣ ದಾಖಲು


- Advertisement -








