Friday, May 3, 2024
spot_imgspot_img
spot_imgspot_img

ಬೆಳ್ತಂಗಡಿ: ಕಾರು- ಖಾಸಗಿ ಬಸ್‌ ನಡುವೆ ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ಸಾವು

- Advertisement -G L Acharya panikkar
- Advertisement -

ಗರ್ಡಾಡಿ : ಗುರುವಾಯನಕೆರೆ ವೇಣೂರು ರಸ್ತೆಯ ಗರ್ಡಾಡಿ ಕುಂಡದಬೆಟ್ಟು (ಗೋಳಿಯಂಗಡಿ) ಬಳಿ ಇನ್ನೋವಾ ಕಾರು ಮತ್ತು ಖಾಸಗಿ ಬಸ್ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ.

ಮೂಡಬಿದಿರೆಯಿಂದ ಬೆಳ್ತಂಗಡಿ ಕಡೆ ಬರುತ್ತಿದ್ದ ಇನೋವಾ, ಬೆಳ್ತಂಗಡಿಯಿಂದ ಮೂಡಬಿದಿರೆಗೆ ಹೋಗುತ್ತಿದ್ದ ಬಸ್ ನಡುವೆ ಈ ಅವಘಡ ಸಂಭವಿಸಿದೆ.

ಮೂಡಬಿದ್ರೆಯ ಗಂಜಿಮಠ ಸೂರಲ್ಪಾಡಿ ನಿವಾಸಿ ನೌಷದ್ ಹಾಜಿ (47) ಮತ್ತು ಚಾಲಕ ಉಲಾಯಿಬೆಟ್ಟು ನಿವಾಸಿ ಫಾಜಿಲ್ (21) ಸಾವನ್ನಪ್ಪಿದವರು ಎಂಬ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ವಿವರ ಇನ್ನಷ್ಟೇ ತಿಳಿದು ಬರಬೇಕಾಗಿದೆ.

- Advertisement -

Related news

error: Content is protected !!