Saturday, April 27, 2024
spot_imgspot_img
spot_imgspot_img

ಬೆಳ್ತಂಗಡಿ: ಡಿ.ಕೆ.ಆರ್. ಡಿ.ಎಸ್ (ರಿ) ನೇತೃತ್ವದಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕು ದಿನಾಚರಣೆ

- Advertisement -G L Acharya panikkar
- Advertisement -
vtv vitla
vtv vitla

ಎಲ್ಲಾ ಪ್ರಜೆಗಳಿಗೆ ಸಮಾನವಾಗಿ ಸಂವಿಧಾನದಲ್ಲಿ ಹಕ್ಕುಗಳು ಕೊಡಮಾಡಿದ್ದು ಪ್ರತಿಯೊಬ್ಬರೂ ಸಮಾನ ಸಮಾನ ಸ್ಥಾನಮಾನಕ್ಕೆ ಅರ್ಹರು ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಬಿಷಪ್ ಲಾರೆನ್ಸ್ ಮುಕ್ಕುಯಿ ನುಡಿದರು.

ಅವರು ಬೆಳ್ತಂಗಡಿ ಧರ್ಮಪ್ರಾಂತ್ಯದ ಸಮಾಜ ಸೇವಾ ವಿಭಾಗವಾದ ಡಿ.ಕೆ.ಆರ್. ಡಿ.ಎಸ್ (ರಿ) ಬೆಳ್ತಂಗಡಿ ನೇತೃತ್ವದಲ್ಲಿ ಸ್ನೇಹಾಂಜಲಿ ಮಹಾಸಂಘ ಜಡ್ಕಲ್, ಸೌಪರ್ಣಿಕಾ ಮಹಾಸಂಘ ಬೀಸಿನಪಾರ ಹಾಗೂ ಸ್ನೇಹಜ್ಯೋತಿ ಮಹಾಸಂಘ ಮುದೂರು ಇವುಗಳ ಆಶ್ರಯದಲ್ಲಿ ಜಡ್ಕಲ್ ಸೈಂಟ್ ಜೋರ್ಜ್ ಸಭಾಭವನದಲ್ಲಿ ಡಿಸೆಂಬರ್- 10 ಅಂತರಾಷ್ಟ್ರೀಯ ಮಾನವ ಹಕ್ಕು ದಿನಾಚರಣಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

vtv vitla

ಕೊಲ್ಲೂರು ಆರಕ್ಷಕ ಠಾಣೆಯ ಠಾಣಾಧಿಕಾರಿ ನಾಸಿರ್ ಹುಸೈನ್ ಮಾನವ ಹಕ್ಕುಗಳ ದಿನಾಚರಣೆಯ ಧ್ಯೇಯವಾಕ್ಯ ಅನಾವರಣ ಗೊಳಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಜಡ್ಕಲ್ ಸೈಂಟ್ ಜೋರ್ಜ್ ಚರ್ಚಿನ ಧರ್ಮಗುರು ವಂದನೀಯ ಫಾ. ತೋಮಸ್ ಪಾರೆಕ್ಕಾಟ್ಟೀಲ್ ಹಾಗೂ ಕರ್ನಾಟಕ ಮಾನವ ಹಕ್ಕುಗಳ ಸಮಿತಿ (ರಿ) ಬೆಳ್ತಂಗಡಿ ಇದರ ಅಧ್ಯಕ್ಷರಾದ ಸೆಬಾಸ್ಟಿಯನ್ ಪಿ. ಸಿ. ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭಹಾರೈಸಿದರು.


ಕುಂದಾಪುರದ ಖ್ಯಾತ ವಕೀಲರಾದ ವೈ. ಶರತ್ ಕುಮಾರ್ ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾನವ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ಜಡ್ಕಲ್ ಸ್ನೇಹಾಂಜಲಿ ಮಹಾಸಂಘದ ಅಧ್ಯಕ್ಷೆ ಶ್ರೀಮತಿ ಮಿನಿ ಜಾಕೊಬ್ ಹಾಗೂ ಬೀಸಿನಪಾರ ಸೌಪರ್ಣಿಕಾ ಮಹಾಸಂಘದ ಅಧ್ಯಕ್ಷೆ ಶ್ರೀಮತಿ ನರ್ಮದಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

vtv vitla
vtv vitla

ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾಗಿರುವ ವಂ. ಫಾ. ಬಿನೋಯಿ. ಎ. ಜೆ. ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಕುಂದಾಪುರ ಯೋಜನೆಯ ಸಂಯೋಜಕಿ ಅಮಲಾಮರಿಯ ಧನ್ಯವಾದವಿತ್ತರು.

ವಂದನಾ ಮಾತ್ತು ಅಂಜಲಿ ಸಂಘದ ಸದಸ್ಯರಾದ ಪುಷ್ಪ, ನರ್ಮದಾ ಮತ್ತು ಸ್ಮಿತಾ ಪ್ರಾರ್ಥನೆ ಹಾಡಿದರು. ಪುಷ್ಪ ಮತ್ತು ನರ್ಮದಾ ಅರಿವಿನ ಹಾಡು ಹಾಡಿದರು. ತರಕಾರಿ ಕೈ ತೋಟ ಸ್ಪರ್ಧಾ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಸುಮಾರು 104 ಮಂದಿ ಉಪಸ್ಥಿತರಿದ್ದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸಂಯೋಜಕಿ ಸಿಸಿಲ್ಯಾ ತಾವ್ರೋ ಕಾರ್ಯಕ್ರಮ ನಿರೂಪಿಸಿದರು.

vtv vitla
vtv vitla
vtv vitla
vtv vitla
vtv vitla
- Advertisement -

Related news

error: Content is protected !!