Friday, May 3, 2024
spot_imgspot_img
spot_imgspot_img

ಬೆಳ್ತಂಗಡಿ: ಮತ್ತೆ ಸುರಿದ “ರಕ್ತ ಮಳೆ”

- Advertisement -G L Acharya panikkar
- Advertisement -

ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯಲ್ಲೂ ವೈವಿಧ್ಯತೆ ಮೂಡಿ ನಿಂತಿದ್ದು, ಕೆಂಪು ಬಣ್ಣದ ಮಳೆ ಸುರಿದ ಘಟನೆ ನಡೆದಿದೆ. ಇದು ಈ ವರ್ಷ ಬೆಳ್ತಂಗಡಿಯಲ್ಲಿ ಕಂಡ ಎರಡನೇ ಪ್ರಕರಣವಾಗಿದೆ.

7 ವಾರದ ಹಿಂದೆ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ ರಕ್ತ ಮಳೆ(ಕೆಂಪು ಮಳೆ) ಸುರಿದಿತ್ತು. ಇಂದು ಕಲ್ಮಂಜ ಗ್ರಾಮದ ಮನೆಯ ಪರಿಸರದಲ್ಲಿ ಕೆಂಪು ಮಳೆ ಸುರಿದಿರುವ ಘಟನೆ ನಡೆದಿದೆ. ಕಲ್ಮಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿಡಿಗಲ್ ಶಾನು ಬೋಗ್ ನಿವಾಸಿ ದಿವಾಕರ ಗೌಡ ಎಂಬವವರ ಮನೆಯ ಪರಿಸರದಲ್ಲಿ ಈ ವೈಚಿತ್ರ ನಡೆದಿದೆ.

ಸಾಮಾನ್ಯವಾಗಿ ಮಳೆಗೆ ಬಣ್ಣ ಇರಲ್ಲ. ಮಳೆ ಸ್ಪಟಿಕ ಶುದ್ಧ (ಕ್ರಿಸ್ಟಲ್ ಕ್ಲೀಯರ್ ) ಇರಬೇಕು. ಕೆಲವೊಮ್ಮೆ ವಾತಾವರಣದ ಧೂಳು ಕರಗಿಸಿಕೊಂಡು ಬಂದಾಗ, ಸಾಮಾನ್ಯವಾಗಿ ಮೊದಲ ಮಳೆ ಸ್ವಲ್ಪ ಮಣ್ಣಿನ ಬಣ್ಣಕ್ಕೆ ಬರುವುದು ಸಹಜ. ಆದರೆ, ಇಲ್ಲಿ ವಿಚಿತ್ರವೆಂಬತೆ ಕೆಂಪು ಮಳೆ ಸುರಿದು, ಈ ಪ್ರದೇಶದ ಜನರನ್ನು ವಿಸ್ಮಯಗೊಳಿಸಿದೆ.

7 ವಾರದ ಹಿಂದೆ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ ಸುರಿದ ರಕ್ತ ಮಳೆ

ಕೆಂಪು ನೀರು ನೋಡಿ ಮಕ್ಕಳಿಗೆ ಖುಷಿ. ಆದರೆ ಹಿರಿಯರಿಗೆ ಈ ಪ್ರಾಕೃತಿಕ ವಿಸ್ಮಯ ನೋಡಿ ಗಾಬರಿ. ಕಳೆದ 7 ವಾರದ ಹಿಂದೆ ಇಂತಹದ್ದೇ ಪ್ರಕರಣ ಬೆಳ್ತಂಗಡಿ ತಾಲೂಕಿನಲ್ಲೇ ನಡೆದಿದೆ. ರಕ್ತದ ಮಳೆ ಎಂದು ಆ ಸಂಗತಿ ದೊಡ್ಡ ಸುದ್ದಿಯಾಗಿತ್ತು. ಇದೀಗ ಮತ್ತೆ ರಕ್ತ ಮಳೆ ಆಗುವ ಮೂಲಕ ಮತ್ತೆ ಜನರನ್ನು ಸೆಳೆದಿದೆ.

ಹಲವು ಬಣ್ಣಗಳಲ್ಲಿ ಮಳೆ ಕಂಡುಬರುವುದು ಅಪರೂಪ. ಕೆಂಪು ಬಣ್ಣದ ಮಳೆ, ಏಷ್ಯಾ ಖಂಡದಲ್ಲಿ, ಮುಖ್ಯವಾಗಿ ಭಾರತದಲ್ಲಿ ಈ ಹಿಂದೆಯೂ ವರದಿಯಾಗಿತ್ತು. ಆಕಾಶಕಾಯಗಳ ಸಿಡಿತದ ತುಂಡುಗಳು ಮಳೆ ನೀರಿನಿಂದ ತೋಯಲ್ಪಟ್ಟು, ಆ ಬಣ್ಣ ಮಳೆಗೆ ಬರುತ್ತವೆ ಎನ್ನುವ ವಿಚಾರ ಪ್ರಚಲಿತದಲ್ಲಿದೆ. ಅಲ್ಲದೆ ಕೆಲವು ಫಂಗಸ್ ಗಳು ಕೂಡಾ ಮಳೆಗೆ ಕೆಂಬಣ್ಣವನ್ನು ನೀಡುತ್ತವೆ ಎನ್ನಲಾಗಿದೆ. ಕೇರಳದಲ್ಲಿ ಕೆಲವರ್ಷಗಳ ಹಿಂದೆ ಕೆಂಪು ಮಳೆ ಸುರಿದಿತ್ತು. 2001 ರಲ್ಲಿ ಕೇರಳದಲ್ಲಿ ನಡೆದ ರಕ್ತ ಮಳೆ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ಆಕಾಶಕಾಯಗಳ ಚೂರಿನಿಂದ ನೀರಿಗೆ ಬಣ್ಣ ಬಂದಿದೆ ಎನ್ನಲಾಗುತ್ತಿತ್ತು. ಇನ್ನು ಇದರ ಬಗ್ಗೆ ಹೆಚ್ಚಿನ ಮಾಹಿತಿ ಲ್ಯಾಬ್ ವರದಿ ಬಂದ ಮೇಲೆ ತಿಳಿಯಬೇಕಷ್ಟೆ.

ಬೆಳ್ತಂಗಡಿ: ಅಚ್ಚರಿ ಮೂಡಿಸಿದ “ರಕ್ತ ಮಳೆ”.!!

- Advertisement -

Related news

error: Content is protected !!