Monday, May 6, 2024
spot_imgspot_img
spot_imgspot_img

ಬೆಳ್ತಂಗಡಿ: ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಮೆದುಳಿನ ನರ ದೌರ್ಬಲ್ಯದಿಂದ ವಿಧಿವಶ

- Advertisement -G L Acharya panikkar
- Advertisement -
vtv vitla

ಬೆಳ್ತಂಗಡಿ: ಮೆದುಳಿನ ನರ ದೌರ್ಬಲ್ಯದಿಂದ ಬಳಲುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಶಿಶಿಲ ಮೂಲದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಓಟ್ಲ ನಿವಾಸಿ ದೇವರಾಜ್ ಹಾಗೂ ಜಾನಕಿ ದಂಪತಿಗಳ ಪುತ್ರಿ 33 ವರ್ಷದ ಶಿಲ್ಪಾ ಮೆದುಳಿನ ನರ ದೌರ್ಬಲ್ಯದಿಂದ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಶಿಲ್ಪಾ ಅವರು ಕಳೆದ ಹಲವು ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಡಬ ತಾಲೂಕು ಜ್ಞಾನ ವಿಕಾಸ ಸಮನ್ವಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ದೇವರಾಜ್ ದಂಪತಿಗಳ ಐವರ ಪುತ್ರಿಯರಲ್ಲಿ ಕೊನೆಯವಳಾದ ಶಿಲ್ಪಾ ಮನೆಗೆ ಆಧಾರವಾಗಿದ್ದರು. ಕಳೆದ 9 ತಿಂಗಳಿನಿಂದ ಮೆದುಳಿನ ನರ ದೌರ್ಬಲ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಇವರ ಚಿಕಿತ್ಸೆಗಾಗಿ ಹಲವು ಸಂಘ-ಸಂಸ್ಥೆಯವರು ಸ್ವಯಂಪ್ರೇರಣೆಯಿಂದ ಸಹಾಯ ಮಾಡಿದ್ದರು. ಮೃತರಿಗೆ ತಂದೆ ದೇವರಾಜ್, ತಾಯಿ ಜಾನಕಿ ಹಾಗೂ ನಾಲ್ವರು ಸಹೋದರಿಯರು ಇದ್ದಾರೆ.

- Advertisement -

Related news

error: Content is protected !!