Saturday, May 4, 2024
spot_imgspot_img
spot_imgspot_img

ಬರೋಬ್ಬರಿ 500 ಸಿಸಿಟಿವಿ ಪರಿಶೀಲಿಸಿ ಯುವತಿ ಬಟ್ಟೆ ಎಳೆದವನ ಬಂಧನ!

- Advertisement -G L Acharya panikkar
- Advertisement -

ಕಳೆದ ನವೆಂಬರ್ 6ರಂದು ರಾತ್ರಿ 9 ಗಂಟೆ ಸುಮಾರಿಗೆ ಬೆಂಗಳೂರಿನ ಸೌತ್ ಎಂಡ್ ಬಳಿಯ ಡಿಸಿಪಿ ಕಚೇರಿ ಮುಂಭಾಗದ ಸಿಗ್ನಲ್ ಬಳಿ ಯುವತಿಯೊಬ್ಬರು ಬೈಕ್ ನಿಲ್ಲಿಸಿಕೊಂಡಿದ್ದು, ಇದೇ ವೇಳೆ ಹರೀಶ್ ಎಂಬಾತ ತನ್ನ ಬೈಕ್‌ನ್ನು ಪಕ್ಕದಲ್ಲಿ ನಿಲ್ಲಿಸಿದ್ದ. ಸಿಗ್ನಲ್ ಬಿಟ್ಟ ವೇಳೆ ಪರಸ್ಪರ ಬೈಕ್ ಸಣ್ಣದಾಗಿ ಟಚ್ ಆಗಿತ್ತು. ಮುಂದೆ ಹೋಗುತ್ತಿದ್ದ ಯುವತಿಯ ಬೈಕ್ ಅಡ್ಡಗಟ್ಟಿದ ಬೈಕ್ ಸವಾರ ಹರೀಶ್ ಯುವತಿಯ ಬಟ್ಟೆ ಹಿಡಿದು ಎಳೆದಾಡಿ ಅವ್ಯಾಚವಾಗಿ ನಿಂದಿಸಿ ಅಲ್ಲಿಂದ ಹೋಗಿದ್ದ.

ಡಿಸಿಪಿ ಕಚೇರಿ ಮುಂದೆಯೇ ಯುವತಿ ಬಟ್ಟೆ ಎಳೆದಾಡಿದ ವಿಚಾರ ಸಾರ್ವಜನಿಕರನ್ನೇ ಶಾಕ್ ಆಗುವಂತೆ ಮಾಡಿತ್ತು. ವಿಚಾರ ತಿಳಿದ ಜಯನಗರ ಪೊಲೀಸರು ಯುವತಿಯನ್ನು ಪತ್ತೆ ಮಾಡಿ ದೂರು ದಾಖಲಿಸಿಕೊಂಡಿದ್ದರು. ಆದರೆ ಆರೋಪಿ ಯಾರು, ಹೇಗಿದ್ದ ಯಾವ ಕಡೆ ಹೋದ ಅನ್ನೋ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಡಿಸಿಪಿ ಕಚೇರಿ ಮುಂಭಾಗಲ್ಲಿ ನಡೆದ ಘಟನೆಯನ್ನು ಸೀರಿಯಸ್ ಆಗಿ ತೆಗೆದುಕೊಂಡ ಪೊಲೀಸರು ಸುಮಾರು 500 ಸಿಸಿಟಿವಿಯನ್ನು ಪರಿಶೀಲನೆ ನಡೆಸಿದಾಗ ಬಿನ್ನಿಪೇಟೆಗೆ ಕರೆದುಕೊಂಡು ಹೋಗಿತ್ತು. ಹರೀಶ್ ಮನೆಯನ್ನು ಪತ್ತೆ ಮಾಡಿದ ಪೊಲೀಸರು ಆರಾಮಾಗಿ ಟಿವಿ ನೋಡುತ್ತಿದ್ದ ಆರೋಪಿ ಹರೀಶ್‍ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಇಂಟ್ರಸ್ಟಿಂಗ್ ವಿಚಾರ ಅಂದ್ರೆ, ಇಷ್ಟೆಲ್ಲಾ ದೊಡ್ಡ ಸುದ್ದಿ ಆಗಿ ಹರೀಶ್ ವಿರುದ್ಧ ಎಫ್‍ಐಆರ್ ದಾಖಲಾಗಿದ್ದರೂ ಕೂಡ ಆರೋಪಿ ಹರೀಶ್‍ಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಅಂತೆ, ಕೋಪದ ಕೈಗೆ ಬುದ್ದಿಕೊಟ್ಟು ಯುವತಿಯ ತಂಟೆಗೆ ಹೋಗಿದ್ದಕ್ಕೆ ಏನಾಯಿತು ಅನ್ನೋದಕ್ಕೆ ಈ ಪ್ರಕರಣ ಒಳ್ಳೆಯ ಉದಾಹರಣೆಯಾಗಿದೆ.

- Advertisement -

Related news

error: Content is protected !!