Friday, June 5, 2026
spot_imgspot_img
spot_imgspot_img

ಬೆಳ್ತಂಗಡಿ: ಸ್ನೇಹಿತನ ಮನೆಗೆ ಹೋಗುವುದಾಗಿ ತಿಳಿಸಿ ಮನೆಬಿಟ್ಟಿದ್ದ ಯುವತಿ ನಾಪತ್ತೆ!

- Advertisement -
- Advertisement -

ಬೆಳ್ತಂಗಡಿ: ಯುವತಿಯೊಬ್ಬಳು ಸ್ನೇಹಿತನ ಮನೆಗೆ ಹೋಗುವ ನೆಪದಲ್ಲಿ ಮನೆ ಬಿಟ್ಟು ನಾಪತ್ತೆಯಾಗಿರುವ ಘಟನೆ ತಾಲೂಕಿನ ನಿಡ್ಲೆ ಗ್ರಾಮದಲ್ಲಿ ನಡೆದಿದೆ. ನಾಪತ್ತೆಯಾದ ಯುವತಿ ಶಿರ್ಲಾಲು ಗ್ರಾಮದ ಮಾಣಿಲದ ಗೋಜ ಮೇರ ಎಂಬವರ ಪುತ್ರಿ ಕುಸುಮಾವತಿ (23) ಎಂದು ತಿಳಿದುಬಂದಿದೆ.

ಕುಸುಮತಿ ಚಿಕ್ಕಂದಿನಿಂದಲೂ ನಿಡ್ಲೆ ಗ್ರಾಮದ ಬೂಡುಜಾಲು ಎಂಬಲ್ಲಿನ ಅಜ್ಜ-ಅಜ್ಜಿಯ ಮನೆಯಲ್ಲಿ ವಾಸವಿದ್ದಳು. ಅ.24ರಂದು ಉಪ್ಪಿನಂಗಡಿಯಲ್ಲಿರುವ ತನ್ನ ಸ್ನೇಹಿತನನ್ನು ಭೇಟಿಯಾಗುವುದಾಗಿ ತನ್ನ ಚಿಕ್ಕಮ್ಮ ಶೋಭಿತಾಗೆ ಹೇಳಿ ಮನೆಯಿಂದ ಹೋಗಿದ್ದ ಬಳಿಕ ನಾಪತ್ತೆಯಾಗಿದ್ದಾಳೆ. ಈ ಘಟನೆ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!