Saturday, June 20, 2026
spot_imgspot_img
spot_imgspot_img

ಬೆಳ್ಳಂಬೆಳಗ್ಗೆ 6 ಲಾರಿಗಳ ನಡುವೆ ಸರಣಿ ಅಪಘಾತ; ನಾಲ್ವರು ಸಾವು, 10ಕ್ಕೂ ಅಧಿಕ ಮಂದಿಗೆ ಗಾಯ..!

- Advertisement -
- Advertisement -
vtv vitla
vtv vitla

ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಳ್ಳಂಬೆಳಗ್ಗೆ ನಡೆದ ಭೀಕರ ಸರಣಿ ಅಪಘಾತಕ್ಕೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 10ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಚಿತ್ರದುರ್ಗದ ಹಿರಿಯೂರು ತಾಲೂಕಿನ ಆಲೂರು ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಗದಗ ಮೂಲದ ಪ್ರಶಾಂತ್ (28), ಹನುಮಪ್ಪ (30), ರಮೇಶ್ (30), ಗುರಪ್ಪ(30) ಎನ್ನಲಾಗಿದೆ.

vtv vitla

ಗದಗ ಜಿಲ್ಲೆ ಹುಯಿಲಗೋಳ್ ನಿಂದ ಬೆಂಗಳೂರಿಗೆ ಈರುಳ್ಳಿ ಸಾಗಣೆ ಮಾಡುತ್ತಿದ್ದ ಲಾರಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟೈರ್ ಸ್ಫೋಟಗೊಂಡ ಕಾರಣ ಪಲ್ಟಿಯಾಗಿದ್ದು ನಾಲ್ವರು ಮೃತಪಟ್ಟಿದ್ದಾರೆ. ಇನ್ನು ಘಟನೆ ವೇಳೆ ಲಾರಿ ಪಲ್ಟಿಯಾಗುತ್ತಿದ್ದಂತೆ ಹಿಂಬದಿ ಚಲಿಸುತ್ತಿದ್ದ ಒಂದು ಕಾರು, ಆರು ಲಾರಿ ಡಿಕ್ಕಿ ಹೊಡೆದುಕೊಂಡಿದೆ. ಸರಣಿ ಅಪಘಾತದಲ್ಲಿ 10ಜನರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಿರಿಯೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!