Thursday, June 18, 2026
spot_imgspot_img
spot_imgspot_img

ಬೆಳ್ಳಾರೆ: ಪ್ರವೀಣ್‌ ಮನೆಗೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ; ಸಹಾಯಧನ ವಿತರಣೆ

- Advertisement -
- Advertisement -

ಬೆಳ್ಳಾರೆ: ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರು ಮನೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡಿ ಪ್ರವೀಣ್ ತಂದೆ, ತಾಯಿ ಹಾಗೂ ಪತ್ನಿಗೆ ಸಾಂತ್ವನ ಹೇಳಿ ಸಹಾಯಧನದ ಚೆಕ್ ವಿತರಿಸಿದರು. ಕುಮಾರಸ್ವಾಮಿ ಅವರು ಮನೆಯವರಿಗೆ 5 ಲಕ್ಷ ರೂ ಚೆಕ್ ನೀಡಿ ಸಹಾಯಧನ ವಿತರಿಸಿದ್ದರು.

ಮೃತ ಮಸೂದ್‌ ಕುಟುಂಬಕ್ಕೂ ನ್ಯಾಯ ಸಿಗಬೇಕು. ಆರೋಪಿಗಳನ್ನು ಎನ್‌ಕೌಂಟರ್‌ ಮಾಡಬೇಕು ಆಗ ಮಾತ್ರ ನಮಗೆ ನ್ಯಾಯ ಸಿಗುತ್ತದೆ ಎಂದು ಮೃತ ಪ್ರವೀಣ್‌ ಪತ್ನಿ ನೂತನ ನೋವು ತೋಡಿಕೊಂಡರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ಎಂ.ಎಲ್.ಸಿ ಬಿ.ಎಂ ಫಾರೂಕ್, ಭೋಜೆಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆಮಾಧವ ಗೌಡ, ಪುತ್ತೂರು ತಾಲೂಕು ಅಧ್ಯಕ್ಷ ಅಶ್ರಫ್ ಕಲ್ಲೇಗ, ದಯಾಕರ ಆಳ್ವ , ಎಂ.ಬಿ ಸದಾಶಿವ, ಮಹಮ್ಮದ್ ಕುಂಞ, ವಸಂತ ಪೂಜಾರಿ, ರತ್ನಾಕರ ಸುವರ್ಣ, ಪ್ರವೀಣ್ಚಂದ್ರ ಜೈನ್, ಜಮೀರ್ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!