Saturday, May 4, 2024
spot_imgspot_img
spot_imgspot_img

ಬೆಳ್ಳಾರೆ: ಪ್ರವೀಣ್‌ ಹತ್ಯೆಗೆ ಹಿಂದಿನ ಅಸಲಿ ಕಾರಣವೇನು..? ತನಿಖೆ ವೇಳೆ ಸ್ಫೋಟಕ ವಿಷಯ ಬಹಿರಂಗ

- Advertisement -G L Acharya panikkar
- Advertisement -

ಬೆಳ್ಳಾರೆ: ನಗರದ ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುವೀಣ್ ನೆಟ್ಟಾರು ಕೊಲೆಗೆ ಅಸಲಿ ಕಾರಣ ಏನು ಎಂಬುದು ಹೊರಗೆ ಬಿದ್ದಿದೆ, ಎನ್‌ಐಎ ಅಧಿಕಾರಿಗಳ ತನಿಖೆ ವೇಳೆ ಈ ಸ್ಫೋಟಕ ಅಂಶ ಬೆಳಕಿಗೆ ಬಂದಿವೆ.

ಎನ್‌ಐಎ ಎಫ್‌ಐಆರ್ ನಲ್ಲಿದೆ ಆ ಒಂದು ಸಿಕ್ರೇಟ್ ಬಹಿರಂಗವಾಗಿದೆ.ಸ್ಥಳೀಯ ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಈ ಕೃತ್ಯಕ್ಕೆ ಸಂಚು ಹಾಕಲಾಗಿತ್ತು. ಸ್ಥಳೀಯ ಜನರಲ್ಲಿ ಭಯ ಹುಟ್ಟಿಸಲು ಪ್ರವೀಣ್ ನೆಟ್ಟಾರು ಹತ್ಯೆಗೆ ಆರೋಪಿಗಳು ಸಂಚು ರೂಪಿಸಿದ್ದರು.

ಪ್ರವೀಣ್ ನೆಟ್ಟಾರು ಕೊಲೆ ಸಂಬಂಧ ಎನ್‌ಐಎ ಎ‌ಐಆರ್ ದಾಖಲಿಸಿದ ನಾಲ್ವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಝಾಕಿರ್, ಮಹಮ್ಮದ್ ಶಫೀಕ್, ಸದ್ಧಾಂ ಮತ್ತು ಅಬ್ಬುಲ್ ಹ್ಯಾರಿಸ್ ಮೇಲೆ ಎಫ್‌ಐಆರ್ ದಾಖಲಾಗಿದೆ. ಐಪಿಸಿ 120ಬಿ, 302, 34 ಹಾಗೂ ಯುಪಿಎ ಕಲಂ 16 ಮತ್ತು 18 ರಡಿ ಎಫ್‌ಐಆರ್ ದಾಖಲಾಗಿದೆ.

ಪ್ರವೀಣ್‌ ನೆಟ್ಟಾರು ಆರೋಪಿಗಳ ವಿರುದ್ಧ ಯುಎಪಿಎ ಕಲಂ ಅಡಿಯಲ್ಲಿ ಕೇಸ್ ದಾಖಲಾಗಿದೆ. ಈಗಾಗಲೇ ಬೆಳ್ಳಾರೆ ಪೊಲೀಸ್‌ ಠಾಣೆ ಕೇಸ್ ಫೈಲ್ ಪಡೆದು ಎನ್‌ಐಎ ತನಿಖೆ ಕೈಗೊಂಡಿದೆ. ಬೆಳ್ಳಾರೆ ಠಾಣೆಯಲ್ಲಿ ದಾಖಲಾದ ಕೇಸ್ ವಿವರಗಳು ಎನ್‌ಐಎ ಎಫ್‌ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಅದರ ಜೊತೆಗೆ ಹತ್ಯೆ ಹಿಂದಿನ ಉದ್ದೇಶ ಏನು ಎಂಬುದು ಉಲ್ಲೇಖಿಸಿದ. ತನಿಖಾ ಸಮಯದಲ್ಲಿ ಬೆಳಕಿಗೆ ಬಂದ ಸಿಕ್ರೇಟ್ ಎನ್‌ಐಎ ಎಫ್‌ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಈ ಬಗ್ಗೆ ಎನ್‌ಐಎ ತಂಡ ತನಿಖೆ ಕೈಗೊಂಡಿದೆ.

vtv vitla
- Advertisement -

Related news

error: Content is protected !!