Monday, June 17, 2024
spot_imgspot_img
spot_imgspot_img

ಬ್ಯಾಂಕ್ ಕಳ್ಳತನಕ್ಕೆ ಯತ್ನಿಸುತ್ತಿದ್ದ ಖದೀಮರು ಅರೆಸ್ಟ್: ಪೊಲೀಸ್ ಸಿಬ್ಬಂದಿಗೆ ನಗದು ನೀಡಿ ಮೆಚ್ಚುಗೆ ಸೂಚಿಸಿದ ಡಿವೈಎಸ್ಪಿ

- Advertisement -G L Acharya panikkar
- Advertisement -

ದಾವಣರೆಗೆ: ಬ್ಯಾಂಕ್ ದರೋಡೆ ಮಾಡಲು ಯತ್ನಸುತ್ತಿದ್ದ ಇಬ್ಬರು ಕಳ್ಳರನ್ನು ದಾವಣಗೆರೆ ಬಡಾವಣೆ ಪೋಲಿಸರು ಬಂಧಿಸಿದ್ದಾರೆ. ದಾವಣಗೆರೆ ಪಿಬಿ ರಸ್ತೆಯಲ್ಲಿರುವ ಆಕ್ಸಿಸ್ ಬ್ಯಾಂಕ್ನಲ್ಲಿ ದರೋಡೆಗೆ ಯತ್ನಿಸಿದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಬ್ಯಾಂಕ್ ಕಾಂಪೌಂಡ್ನಲ್ಲಿ ಮಷೀನ್ ಕಟ್ ಮಾಡುವ ಶಬ್ದ ಬಂದಿದೆ. ಇಬ್ಬರು ಕಳ್ಳರು ಆಕ್ಸಿಸ್ ಬ್ಯಾಂಕ್‌ ನ ಕಿಟಕಿ ಸರಳಗಳನ್ನು ಕಟ್ ಮಾಡಿದ್ದಾರೆ. ಇದು ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ರಘು ಮತ್ತು ರಮೇಶ್ ಎಂಬ ಕಳ್ಳರನ್ನು ರೆಡ್ ಹ್ಯಾಂಡ್ ಆಗಿ ಅರೆಸ್ಟ್ ಮಾಡಿದ್ದಾರೆ. ಕಳ್ಳತನಕ್ಕೆ ಬಳಸಿದ ಆಯುಧಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಕಲಂ 457.380.527 ಐಪಿಸಿ ಪ್ರಕಾರ ಪ್ರಕರಣವನ್ನು ಬಡಾವಣೆ ಪೋಲಿಸರು ದಾಖಲಿಸಿಕೊಂಡಿದ್ದಾರೆ.

ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಬಡಾವಣೆ ಠಾಣೆಯ ಸಿಬ್ಬಂದಿಗಳಾದ ಧನಂಜಯ್ ರಾಜ ಅರಸ್ ಮತ್ತು ಸುರೇಶ್ ಎಲ್ ರವರ ಕರ್ತವ್ಯಕ್ಕೆ ನಗರ ಡಿವೈಎಸ್ಪಿ ನರಸಿಂಹ ವಿ ತಾಮ್ರದ್ವಜ ರವರು ಶ್ಲಾಘಿಸಿ ಸನ್ಮಾನಿಸಿದ್ದಾರೆ. ಹಾಗೂ ನಗದು ಬಹುಮಾನ ನೀಡಿದ್ದಾರೆ. ಈ ಸಂದರ್ಭದಲ್ಲಿ ಬಡಾವಣೆ ಠಾಣೆಯ ಪಿಐ ಧನಂಜಯ್, ಸಿಪಿಐ ಸಂಚಾರರಾದ ಅನಿಲ್, ಕೆಟಿಜೆ ನಗರ ವೃತ್ತದ ಸಿಪಿಐ ಗುರುಬಸವರಾಜ್, ಜಿಲ್ಲಾ ರಕ್ಷಣಾಧಿಕಾರಗಳಾದ ರಿಷ್ಯಂತ ಸಿಬ್ಬಂದಿ ಕಾರ್ಯಕ್ಕೆ ಶ್ಲಾಘಿಸಿದ್ದಾರೆ.

- Advertisement -

Related news

error: Content is protected !!