- Advertisement -
- Advertisement -
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಆರ್.ಆರ್,ನಗರದಲ್ಲಿರುವ ಪವಿತ್ರ ಗೌಡ ಮನೆಯಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಸ್ಥಳ ಮಹಜರು ನಡೆಸಿದರು. ಪವಿತ್ರ ಜೊತೆ ಮತ್ತೊಬ್ಬ ಆರೋಪಿ ಪವನ್ ನನ್ನು ಕೂಡ ಕರೆತಂದಿದ್ದರು. ಪ್ರಮುಖ ಸಾಕ್ಷಿಗಳು ಸಿಗಬಹುದು ಎನ್ನುವ ನಿಟ್ಟಿನಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಆರ್.ಆರ್,ನಗರದಲ್ಲಿರುವ ಪವಿತ್ರ ಗೌಡ ಮನೆ ಹತ್ತಿರದ ಎರಡೂ ಮಾರ್ಗಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿ ಪೊಲೀಸ್ ಭದ್ರತೆಯಲ್ಲಿ ಎಫ್.ಎಸ್.ಎಲ್ ಟೀಮ್ ಜೊತೆಗೆ ಪವಿತ್ರ ಗೌಡ ಮನೆಯಲ್ಲಿ ಸ್ಥಳ ಮಹಜರು ನಡೆಸಿದರು.ಕೊಲೆಯಾದ ದಿನ ಪವಿತ್ರ ಗೌಡ ಧರಿಸಿರುವ ಬಟ್ಟೆ, ಚಪ್ಪಲಿಗಳನ್ನು ವಶಪಡಿಸಿಕೊಳ್ಲುವ ಸಾಧ್ಯತೆಗಳಿವೆ, ಅದೇ ರೀತಿ ಮನೆಯ ಬಳಿ ಇರುವ ಸಿ.ಸಿ.ಟಿವಿ ಫೂಟೇಜ್‌ಗಳನ್ನು ಸಂಗ್ರಹಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.ಎಫ್.ಎಸ್.ಎಲ್ ಟೀಮ್ ಲುಮಿನಾಲ್ ಟೆಸ್ಟ್‌ಗೆ ಕಳುಹಿಸಲಿದೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
- Advertisement -