Thursday, July 23, 2026
spot_imgspot_img
spot_imgspot_img

ಭಟ್ಕಳ: ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಹೋದ ಯುವತಿ ನಾಪತ್ತೆ!

- Advertisement -
- Advertisement -

ಭಟ್ಕಳ: ಮನೆಯಿಂದ ಕುಂದಾಪುರಕ್ಕೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದ ಯುವತಿಯೋರ್ವಳು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಭಟ್ಕಳದಲ್ಲಿ ನಡೆದಿದೆ. ನಾಪತ್ತೆಯಾದ ಯುವತಿ ಮಂಕಿಯ ಯತ್ನಳ್ಳಿ, ಆಡುಕಾಲ್ ನಿವಾಸಿ, ತಾರಾ ನಾರಾಯಣ ಮರಾಠಿ (19)ಎಂದು ಗುರುತಿಸಲಾಗಿದೆ.

ನ. 5ರಂದು ಈಕೆ ಕುಂದಾಪುರಕ್ಕೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೊರಟವರು ಅಲ್ಲಿಗೂ ಹೋಗದೇ ಮನೆಗೆ ವಾಪಸ್ ಬಾರದೇ ಕಾಣೆಯಾಗಿದ್ದಾಳೆ. ಈ ಕುರಿತು ಯುವತಿಯ ತಂದೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.

- Advertisement -

Related news

error: Content is protected !!