Saturday, May 4, 2024
spot_imgspot_img
spot_imgspot_img

ಭಾರತದ ಮೊದಲ ಸೌರಶಕ್ತಿ ಚಾಲಿತ ಗ್ರಾಮವಾಗಿ ಮೊಧೇರಾ; ಪ್ರಧಾನಿ ಮೋದಿ ಘೋಷಣೆ

- Advertisement -G L Acharya panikkar
- Advertisement -

ಗುಜರಾತ್: ಇಲ್ಲಿನ ಮೆಹ್ಸಾನಾ ಜಿಲ್ಲೆಯ ಮೊಧೇರಾ ಗ್ರಾಮವನ್ನು ಭಾರತದ ಮೊದಲ 24*7 ಸೌರಶಕ್ತಿ ಚಾಲಿತ ಗ್ರಾಮವೆಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ತವರು ಕ್ಷೇತ್ರ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಭಾನುವಾರ ಈ ಘೋಷಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಪ್ರಸ್ತುತ ನಾವು ವಿದ್ಯುತ್ ಬಿಲ್ ಪಾವತಿ ಮಾಡುವುದಿಲ್ಲ. ಆದರೆ ಅದನ್ನು ಮಾರಾಟ ಮಾಡಿ ಆದಾಯ ಗಳಿಸಲು ಶಕ್ತರಾಗಿದ್ದೇವೆ ಎಂದರು.

ಕೆಲ ಸಮಯದ ಹಿಂದೆ ಇಲ್ಲಿನ ಜನರಿಗೆ ಸರ್ಕಾರವೇ ವಿದ್ಯುತ್ ನೀಡುತ್ತಿತ್ತು. ಆದರೆ ಇನ್ನು ಮುಂದೆ ಬೆಳಕಿಗಾಗಿ ಸರ್ಕಾರವನ್ನು ಅವಲಂಬಿಸಬೇಕಾಗಿಲ್ಲ. ಮನೆಯಲ್ಲೇ ಸೌರ ಫಲಕ ಅಳವಡಿಸಿ ತಮಗೆ ಬೇಕಾದ ವಿದ್ಯುತ್‌ನ್ನು ತಾವೇ ಉತ್ಪಾದಿಸಿಕೊಳ್ಳುತ್ತಾರೆ ಎಂದವರು ತಿಳಿಸಿದರು.

ಮೊಧೇರಾ ಸೂರ್ಯ ದೇವಾಲಯಕ್ಕೆ ಹೆಸರುವಾಸಿಯಾಗಿದ್ದು, ಸೌರಶಕ್ತಿಯಲ್ಲಿಯೂ ಪ್ರಸಿದ್ದಿ ಪಡೆಯಲಿದೆ. ಮೊಧೇರಾಕ್ಕೆ ಇದೊಂದು ಐತಿಹಾಸಿಕ ದಿನ ಎಂದು ಬಣ್ಣಿಸಿದರು.

- Advertisement -

Related news

error: Content is protected !!