Saturday, May 18, 2024
spot_imgspot_img
spot_imgspot_img

ಭಾರತದ 200 ಕೋಟಿ ಡೋಸ್ ಕೋವಿಡ್ ಲಸಿಕೆ ಸಾಧನೆ ಶ್ಲಾಘಿಸಿದ ಬಿಲ್ ಗೇಟ್ಸ್; ಧನ್ಯವಾದ ತಿಳಿಸಿದ ಮೋದಿ

- Advertisement -G L Acharya panikkar
- Advertisement -

ಕೋವಿಡ್ ಲಸಿಕೆ ನೀಡಿಕೆಯಲ್ಲಿ ಭಾರತ 200 ಕೋಟಿ ಡೋಸ್ ಮೈಲುಗಲ್ಲು ಸಾಧನೆ ಮಾಡಿದ್ದು, ಇದನ್ನು ಟೆಕ್ ದಿಗ್ಗಜ, ಧನಿಕ ಬಿಲ್ ಗೇಟ್ಸ್ ಶ್ಲಾಘಿಸಿದ್ದಾರೆ. ಬಿಲ್ ಗೇಟ್ಸ್ ಶ್ಲಾಘನೆಗೆ ಧನ್ಯವಾದ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿನ ಲಸಿಕೆ ಅಭಿಯಾನವು ವೇಗ ಮತ್ತು ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಇದು ವಿಜ್ಞಾನಿಗಳು, ವೈದ್ಯರು, ನರ್ಸ್ ಸೇರಿದಂತೆ ಹಲವರ ಪ್ರಯತ್ನದಿಂದ ಆಗಿದೆ.

ದೇಶದ ಜನರನ್ನು ಹೊಗಳಿದ ಮೋದಿ, ನಮ್ಮ ಜನರು ವಿಜ್ಞಾನದ ಮೇಲೆ ತುಂಬಾ ನಂಬಿಕೆ ಇರಿಸಿ ಲಸಿಕೆ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಭಾರತದ ಲಸಿಕೆ ಅಭಿಯಾನ ದೊಡ್ಡ ಪ್ರಮಾಣದಲ್ಲಿ ಮತ್ತು ವೇಗದಿಂದ ಕೂಡಿತ್ತು. ವಿಜ್ಞಾನಿಗಳು, ವೈದ್ಯರು, ನರ್ಸ್ ಸೇರಿದಂತೆ ಹಲವರ ಪ್ರಯತ್ನದ ಫಲವಾಗಿದೆ. ಅದೇ ವೇಳೆ ಭಾರತದ ಜನರು ಸಮಯಕ್ಕೆ ಸರಿಯಾಗಿ ಲಸಿಕೆ ಸ್ವೀಕರಿಸಲುಸಲು ವಿಜ್ಞಾನದ ಮೇಲೆ ಅಪಾರ ನಂಬಿಕೆ ಇರಿಸಿದ್ದಾರೆ ಎಂದು ಹೇಳಿದ್ದಾರೆ.

ಇದಕ್ಕಿಂತ ಮುಂಚೆ ಹಿಂದೂಸ್ತಾನ್ ಟೈಮ್ಸ್ ವರದಿ ಶೇರ್ ಮಾಡಿದ ಬಿಲ್ ಗೇಟ್ಸ್, 200 ಕೋಟಿ ಲಸಿಕೆ ಮೈಲುಗಲ್ಲು ಸಾಧನೆ ಮಾಡಿದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು. ಭಾರತದ ಲಸಿಕೆ ಉತ್ಪಾದಕರ ಜತೆಗಿನ ನಮ್ಮ ಸಹಭಾಗಿತ್ವ ಮತ್ತು ಕೊವಿಡ್-19 ನ್ನು ಎದುರಿಸಲು ಭಾರತ ಸರ್ಕಾರದ ಕಾರ್ಯಗಳಿಗೆ ನಾವು ಕೃತಜ್ಞರಾಗಿದ್ದೇವೆ ಎಂದು ಹೇಳಿದ್ದಾರೆ. ಜಗತ್ತಿನ ಅತೀ ದೊಡ್ಡ ಲಸಿಕೆ ಅಭಿಯಾನ ಕಳೆದ ವರ್ಷ ಭಾರತದಲ್ಲಿ ಆರಂಭವಾಗಿದ್ದು ಕಳೆದ ಭಾನುವಾರ 200 ಕೋಟಿ ಡೋಸ್ ಲಸಿಕೆ ನೀಡಿಕೆ ಸಾಧನೆ ಮಾಡಿತ್ತು. ಈ ಸಾಧನೆ ಮಾಡಿದ ಕೂಡಲ ಭಾರತ ಮತ್ತೊಮ್ಮೆ ಇತಿಹಾಸ ರಚಿಸಿದೆ. 200 ಕೋಟಿ ಲಸಿಕೆ ನೀಡಿಕೆ ಸಾಧನೆ ಮಾಡಿದ್ದಕ್ಕೆ ಎಲ್ಲರಿಗೂ ಅಭಿನಂದನೆಗಳು. ಈ ಸಾಧನೆಗೆ ಸಹಕರಿಸಿದ ಎಲ್ಲರ ಬಗ್ಗೆಯೂ ಹೆಮ್ಮೆ ಇದೆ. ಇದು ಜಾಗತಿಕ ಮಟ್ಟದಲ್ಲಿ ಕೋವಿಡ್-19 ವಿರುದ್ಧದ ಹೋರಾಟವನ್ನು ಬಲಗೊಳಿಸುತ್ತದೆ ಎಂದಿದ್ದಾರೆ ಮೋದಿ.

- Advertisement -

Related news

error: Content is protected !!