Tuesday, May 7, 2024
spot_imgspot_img
spot_imgspot_img

ಇಂದು ದೇಶದ ಜನತೆಯನ್ನುದ್ದೇಶಿ ಪ್ರಧಾನಿ ಮೋದಿ ಮನ್‌ಕಿ ಬಾತ್

- Advertisement -G L Acharya panikkar
- Advertisement -

ನವದೆಹಲಿ: ದೇಶದ ಜನತೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ಮಾತನಾಡಲಿದ್ದಾರೆ.

ಈ ಬಾರಿ ಹಲವು ವಿಚಾರಗಳ ಕುರಿತು ಮೋದಿ ಬೆಳಕು ಚೆಲ್ಲಲಿದ್ದಾರೆ. ಈ ತಿಂಗಳ ಆರಂಭದಲ್ಲಿ ಮೋದಿ, ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಕಲೆ, ಸಂಸ್ಕೃತಿ , ಪ್ರವಾಸೋದ್ಯಮ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದ ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಳ್ಳಲು ದೇಶದ ಜನರಲ್ಲಿ ಮನವಿ ಮಾಡಿದ್ದರು.

ಸಂದೇಶಗಳನ್ನು ಕತೆಗಳನ್ನು ಹಂಚಿಕೊಳ್ಳಲು ಮೋದಿ, ಟೋಲ್ ಫ್ರೀ ಸಂಖ್ಯೆಯನ್ನು ಹಂಚಿಕೊಂಡಿದ್ದರು. ಈ ನಂಬರ್ ಮೂಲಕ ಇಂಗ್ಲೀಷ್ ಅಥವಾ ಹಿಂದಿ ಮೂಲಕ ರೆಕಾರ್ಡ್ ಮಾಡಲು ಅವಕಾಶ ನೀಡಲಾಗಿದೆ.

ಇದು 74ನೇ ಮನ್ ಕಿ ಬಾತ್ ಕಾರ್ಯಕ್ರಮವಾಗಿದೆ. ಪ್ರತಿ ತಿಂಗಳ ಕೊನೆಯ ಭಾನುವಾರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಮೋದಿ ನಡೆಸುತ್ತಾರೆ. ಈ ಬಾರಿ ಕೊನೆಯ ಭಾನುವಾರ, ತಿಂಗಳ ಕೊನೆಯ ದಿನವಾಗಿದೆ. ಇದೀಗ ಮೋದಿ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ದೇಶದ ಜನತೆ ಕಾತರದಿಂದ ಕಾಯುತ್ತಿದ್ದಾರೆ.

- Advertisement -

Related news

error: Content is protected !!