Friday, April 19, 2024
spot_imgspot_img
spot_imgspot_img

ಭಾರತೀಯರೂ ಸೇರಿದಂತೆ 22 ಮಂದಿ ಪ್ರಯಾಣಿಕರಿದ್ದ ವಿಮಾನ ನಾಪತ್ತೆ

- Advertisement -G L Acharya panikkar
- Advertisement -

ನಾಲ್ವರು ಭಾರತೀಯರೂ ಸೇರಿದಂತೆ 22 ಮಂದಿ ಪ್ರಯಾಣಿಕರಿದ್ದ ವಿಮಾನವೊಂದು ಸಂಪರ್ಕ ಕಡಿದುಕೊಂಡು ನಾಪತ್ತೆಯಾದ ಘಟನೆ ನಡೆದಿದೆ. ನೇಪಾಳದ ಪೋಖರಾದಿಂದ ನೇಪಾಳದ ಜೋಮ್ಸೋಮ್‌ ಗೆ ಹಾರುತ್ತಿದ್ದ ವಿಮಾನವು ಭಾನುವಾರ ಬೆಳಗ್ಗೆ ಸಂಪರ್ಕ ಕಳೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾರಾ ಏರ್‌ನ 9 NAET ಅವಳಿ-ಎಂಜಿನ್ ವಿಮಾನವು ಬೆಳಿಗ್ಗೆ 9.55 ಕ್ಕೆ ಹಾರಿದ್ದು, ಸ್ವಲ್ಪ ಸಮಯದ ನಂತರ ರಾಡಾರ್‌ ನಿಂದ ಸಂಪರ್ಕ ಕಳೆದುಕೊಂಡಿದೆ. ವಿಮಾನದ ಪತ್ತೆಗೆ ಫೀಸ್ಟೆಲ್ ಹೆಲಿಕಾಪ್ಟರ್ ಕಳುಹಿಸಲಾಗಿದೆ. ಸಂಪರ್ಕ ಕಳೆದುಕೊಂಡ ವಿಮಾನದ ಪೈಲಟ್ ಅವರನ್ನು ಪ್ರಭಾಕರ ಪ್ರಸಾದ್ ಘಿಮಿರೆ ಎಂದು ಗುರುತಿಸಲಾಗಿದೆ. ನಾಪತ್ತೆಯಾಗಿರುವ ವಿಮಾನದಲ್ಲಿ ನಾಲ್ವರು ಭಾರತೀಯರು ಹಾಗೂ ಇಬ್ಬರು ವಿದೇಶಿ ಪ್ರಜೆಗಳಿದ್ದಾರೆ. ಉಳಿದ ಪ್ರಯಾಣಿಕರು ನೇಪಾಳಿ ಪ್ರಜೆಗಳಾಗಿದ್ದಾರೆ.

- Advertisement -

Related news

error: Content is protected !!