Saturday, May 18, 2024
spot_imgspot_img
spot_imgspot_img

ಭಾರತೀಯ ವಾಯುಸೇನೆಯ MiG-21 ವಿಮಾನ ಪತನ; ಪೈಲೆಟ್ ದುರಂತ ಸಾವು

- Advertisement -G L Acharya panikkar
- Advertisement -
vtv vitla
vtv vitla
vtv vitla
vtv vitla

ದೆಹಲಿ: ಭಾರತೀಯ ವಾಯುಸೇನೆಯ ಮಿಗ್-21 ಯುದ್ಧ ವಿಮಾನ ಡಿಸೆಂಬರ್ 24 ಪತನಗೊಂಡಿದ್ದು ಘಟನೆಯಲ್ಲಿ ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಮೃತಪಟ್ಟಿದ್ದಾರೆ. ಈ ಬಗ್ಗೆ ಭಾರತೀಯ ವಾಯುಸೇನೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

ರಾಜಸ್ಥಾನದ ಜೈಸಲ್ಮೇರ್ ಬಳಿ ಡಿಸೆಂಬರ್ 24ರ ಸಂಜೆ ಅಪಘಾತ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದರು. ವಿಮಾನದ ಪೈಲೆಟ್​ಗಾಗಿ ಶೋಧಕಾರ್ಯ ನಡೆಸಲಾಗಿತ್ತು. ವಿಮಾನ ಪತನಗೊಂಡಿರುವ ಖಚಿತ ಸ್ಥಳದ ಬಗ್ಗೆ ಮಾಹಿತಿ ಬಹಿರಂಗಪಡಿಸಿರಲಿಲ್ಲ..

ಸ್ಯಾಮ್ ಪೊಲೀಸ್ ಠಾಣಾ ವ್ಯಾಪ್ತಿಯ ನೇಷನಲ್ ಪಾರ್ಕ್ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ ಎಂದು ಜೈಸಲ್ಮೇರ್ ಎಸ್​ಪಿ ಅಜಯ್ ಸಿಂಗ್ ತಿಳಿಸಿದ್ದರು. ಸ್ಥಳೀಯ ಪೊಲೀಸರು ಈಗಾಗಲೇ ವಿಮಾನ ಅಪಘಾತ ಪ್ರದೇಶಕ್ಕೆ ಭೇಟಿ ನೀಡಿದ್ದರು.

ವಿಮಾನ ಅಪಘಾತ ಆಗಿರುವ ಬಗ್ಗೆ ಭಾರತೀಯ ವಾಯುಸೇನೆಯ ಟ್ವಿಟರ್ ಹ್ಯಾಂಡಲ್ ಕೂಡ ದೃಢಪಡಿಸಿತ್ತು. ಡಿಸೆಂಬರ್ 24ರ ರಾತ್ರಿ ಸುಮಾರು 8.30 ರ ವೇಳೆಗೆ ಮಿಗ್-21 ಏರ್ ಕ್ರಾಫ್ಟ್ ಪತನವಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಟ್ವೀಟ್ ಮಾಡಲಾಗಿದೆ ಎಂದು ಈ ಮೊದಲು ಟ್ವೀಟ್ ಮಾಡಿತ್ತು. ಘಟನೆಯಲ್ಲಿ ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

vtv vitla
- Advertisement -

Related news

error: Content is protected !!