Thursday, April 25, 2024
spot_imgspot_img
spot_imgspot_img

ಭೂಕಂಪದ ಅಬ್ಬರಕ್ಕೆ ಕಂಗಲಾದ ಟರ್ಕಿ, ಸಿರಿಯಾ..! ಮತ್ತೆ ನಡುಗಿದ ವಸುಂಧರೆ – ಸಾವಿನ ಸಂಖ್ಯೆ ಏರಿಕೆ – ಸಂಕಷ್ಟಕ್ಕೆ ಹೆಗಲು ಕೊಟ್ಟ ಭಾರತ

- Advertisement -G L Acharya panikkar
- Advertisement -

ಸೋಮವಾರ ಸಂಭವಿಸಿದ ಅವಳಿ ಪ್ರಬಲ ಭೂಕಂಪಕ್ಕೆ ತತ್ತರಿಸಿರುವ ಟರ್ಕಿ ಹಾಗೂ ಸಿರಿಯಾದಲ್ಲಿ ಇಂದು ಮತ್ತೆ ಭೂಮಿ ನಡುಗಿದೆ. ಇಂದು 5.6 ತೀವ್ರತೆಯ ಭೂಕಂಪ ವರದಿಯಾಗಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿದೆ. ಭೂಕಂಪದ ಕೇಂದ್ರವು ಭೂಮಿಯ 2 ಕಿಮೀ ಆಳದಲ್ಲಿದೆ ಉಲ್ಲೇಖಿಸಿದೆ.

ಟರ್ಕಿಯಲ್ಲಿ ಈವರೆಗೆ 3419 ಮಂದಿ ಹಾಗೂ ಸಿರಿಯಾದಲ್ಲಿ 1,600ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಟರ್ಕಿ ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿ ಪ್ರಕಾರ, ಕನಿಷ್ಠ 15,834 ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ 7,840 ಜನರನ್ನು ರಕ್ಷಿಸಲಾಗಿದೆ. ಮಧ್ಯಪ್ರಾಚ್ಯ ದೇಶಗಳಾದ ಲೆಬನಾನ್‌, ಸೈಪ್ರಸ್‌ ಹಾಗೂ ಈಜಿಪ್ಟ್‌ನಲ್ಲಿಯೂ ಭೂಮಿ ಕಂಪಿಸಿತ್ತು.

ಶತಮಾನದ ದುರಂತ; ಟರ್ಕಿ ಸಂಕಷ್ಟಕ್ಕೆ ಹೆಗಲಾದ ಭಾರತ – ದೋಸ್ತ್‌ ಎಂದು ಕರೆದರು..!

ಶತಮಾನದ ದುರಂತವೆಂದು ಪರಿಗಣಿತವಾದ ಭೂಕಂಪನದಿಂದ ಜರ್ಜರಿತವಾಗಿರುವ ಟರ್ಕಿಗೆ ಭಾರತ ನೆರವಿನ ಹಸ್ತ ಚಾಚಿದೆ. ಈ ಕಾರಣದಿಂದ ಟರ್ಕಿ ಭಾರತವನ್ನು ದೋಸ್ತ್‌ ಎಂದು ಕರೆದಿದೆ. ದೋಸ್ತ್‌ ಎಂಬ ಪದಕ್ಕೆ ಹಿಂದಿ ಮತ್ತು ಟರ್ಕಿ ಭಾಷೆಗಳಲ್ಲಿ ಸಮಾನ ಅರ್ಥವಿದೆ ಎಂದು ದೆಹಲಿಯ ಟರ್ಕಿ ರಾಯಭಾರಿ ಫೈರಾತ್‌ ಸುನೇಲ್‌ ತಿಳಿಸಿದ್ದಾರೆ.
ಭೂಕಂಪ ಪೀಡಿತ ಟರ್ಕಿಗೆ ಎನ್‌ಡಿಆರ್‌ಎಫ್‌ನ ಮೊದಲ ತಂಡವನ್ನು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಕಳುಹಿಸಿದ ನಂತರ ಟ್ವಿಟರ್‌ನಲ್ಲಿ ಈ ಹೇಳಿಕೆ ನೀಡಿದ್ದಾರೆ. 51 ಮಂದಿಯನ್ನು ಒಳಗೊಂಡ ಎನ್‌ಡಿಆರ್‌ಎಫ್‌ ತಂಡ ಡೆಪ್ಯುಟಿ ಕಮಾಡೆಂಟ್‌ ದೀಪಕ್‌ ತಲವಾರ್‌ ನೇತೃತ್ವದ ತಂಡ ಗಾಜಿಯಾಬಾದ್‌ ವಿಮಾನನಿಲ್ದಾಣದಿಂದ ಟರ್ಕಿಗೆ ಪ್ರಯಾಣ ಬೆಳೆಸಿದೆ.

ಸೋಮವಾರ ಕೇಂದ್ರ ಸರ್ಕಾರ ಟರ್ಕಿಗೆ ನೆರವು ನೀಡುವ ಕುರಿತು ಹೇಳಿಕೆ ನೀಡಿದ್ದು, 100 ಮಂದಿಯ ಎರಡು ತಂಡ, ಶ್ವಾನ ದಳ, ಇತರ ಸಲಕರಣೆಗಳೊಂದಿಗೆ ರಕ್ಷಣಾ ಕಾರ್ಯಾಚರಣೆಗಾಗಿ ಟರ್ಕಿಗೆ ತೆರಳಲಿದೆ ಎಂದು ತಿಳಿಸಿತ್ತು.

- Advertisement -

Related news

error: Content is protected !!