ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ, ಇಂದು ಮಂಗಳೂರಿನ ಜನತೆಗೆ ಧನ್ಯವಾದ ತಿಳಿಸಿದ್ದಾರೆ. ಇದೀಗ ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ. ಮೋದಿಯನ್ನು ಮಂಗಳೂರಿಗೆ ಜನರ ಸ್ವಾಗತಕ್ಕೆ ರೀತಿಗೆ ಮನಸೋತಿದ್ದಾರೆ. ಅನೇಕ ಯೋಜನೆಗೆ ಚಾಲನೆ ನೀಡುವ ಮೂಲಕ ಅಭಿವೃದ್ಧಿಗೆ ಮಂಗಳೂರು ಮುನ್ನಡಿ ಬರೆದಿದೆ ಎಂದು ಹೇಳಿದ್ದಾರೆ.

ಮೋದಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅನೇಕ ಯೋಜನೆಗಳಿಗೆ ಸಾಕ್ಷಿಯಾಗಿದ್ದರು. ಮಂಗಳೂರಿನ ಅನೇಕ ಕಡೆಯಿಂದ ಮೋದಿ ಭಾಷಣ ಕೇಳಲು ಬಂದಿದ್ದರು. ದೊಡ್ಡ ಸಾಗರವೇ ಮಂಗಳೂರಿನಲ್ಲಿ ಕಂಡಿದ್ದು ನಿಜ. ಈ ಬಗ್ಗೆ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಮಂಗಳೂರಿನ ಜನತೆಗೆ ಕನ್ನಡದಲ್ಲಿ ಧನ್ಯವಾದಗಳು ಹೇಳಿದ್ದಾರೆ.
ಮೋದಿ ಮಾಡಿದ ಟ್ವೀಟ್
“ಮಂಗಳೂರಿನ ಜನರ ಪ್ರೀತಿ, ಅಕ್ಕರೆಗೆ ವಿನಮ್ರನಾಗಿರುವೆ. ಪ್ರಮುಖ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದುದು ಸಂತಸ ತಂದಿದೆ”
ಮೋದಿ ಕಾರ್ಯಕ್ರಮ
ಕೇರಳದ ಕೊಚ್ಚಿನ್ನಲ್ಲಿ ದೇಶೀ ನಿರ್ಮಿತ ವಿಮಾನ ವಾಹಕ ಯುದ್ಧನೌಕೆ ಐಎನ್ಎಸ್ ವಿಕ್ರಾಂತ್ ಲೋಕಾರ್ಪಣೆ ಮಾಡಿದ ನಂತರ ಪ್ರಧಾನಿ ನರೇಂದ್ರ ಮೋದಿ ಇದೀಗ ಮಂಗಳೂರಿಗೆ ಆಗಮಿಸಿದ್ದಾರೆ. ಮಂಗಳೂರಿನ ಬಂಗ್ರಕೂಳೂರಿನಲ್ಲಿ ಬಿಜೆಪಿ ಬೃಹತ್ ಕಾರ್ಯಕ್ರಮ ಆಯೋಜಿಸಿತ್ತು. ಸಮಾವೇಶ ಸ್ಥಳದಲ್ಲಿ ಕೇಸರಿ ಶಾಲು ಬೀಸುತ್ತಾ ಮೋದಿ ಪರ ಘೋಷಣೆ ಕೂಗುತ್ತಾ ಯುವತಿಯರು ಡಾನ್ಸ್ ಮಾಡಿ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ. ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಲಕ್ಷಾಂತರ ಭಾಗಿಯಾಗಿದ್ದರು. ಅನೇಕ ಗಣ್ಯವಕ್ತಿಗಳು ಪಕ್ಷ ಸಂಘಟಕರು, ಸಚಿವರು, ಶಾಸಕರು, ಸಂಸದರು, ಕಾರ್ಯಕರ್ತರು ಹರ್ಷದಿಂದ ಭಾಗಿಯಾಗಿದ್ದರು.









