Friday, April 26, 2024
spot_imgspot_img
spot_imgspot_img

30 ವರ್ಷದ ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ; ಆರೋಪಿಯನ್ನು ಸೆರೆ ಹಿಡಿದ ಸಾಕು ನಾಯಿ!

- Advertisement -G L Acharya panikkar
- Advertisement -

ಕೊಯಮತ್ತೂರು: ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಸಾಕು ನಾಯಿ ಹಿಡಿದಿದೆ. ಸ್ಥಳದಿಂದ ಪರಾರಿಯಾಗಲು ಆರೋಪಿಗೆ ನಾಯಿ ಅಡ್ಡಿಪಡಿಸಿದ್ದು, ಮನೆಯವರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಚಿನ್ನಾಭರಣ ಕೆಲಸ ಮಾಡಿಕೊಂಡಿರುವ 29 ವರ್ಷದ ಎಂ. ದಿಲೀಪ್ ಕುಮಾರ್ ಅತ್ಯಾಚಾರ ಎಸಗಿದ ಆರೋಪಿ.


ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ಸೆಲ್ವಪುರಂನಲ್ಲಿ ಈ ಕುತೂಹಲಕಾರಿ ಘಟನೆ ನಡೆದಿದೆ.
ಶುಕ್ರವಾರ ರಾತ್ರಿ ಸೆಲ್ವಪುರಂ ಮನೆಯೊಂದಕ್ಕೆ ತೆರಳಿದ ದಿಲೀಪ್ ಕುಮಾರ್ 30 ವರ್ಷದ ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಸಾಕುನಾಯಿ ಆತನ ಪ್ಯಾಂಟ್ ಕಚ್ಚಿ ಹಿಡಿದು ತಡೆದಿದ್ದಲ್ಲದೆ ಬೊಗಳಿದೆ. ಇದರಿಂದ ಎಚ್ಚೆತ್ತ ಮನೆಯವರು ಆತನನ್ನು‌ ನೆರೆಹೊರೆಯವರ ಸಹಾಯದಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ.


ಮಹಿಳೆಯ ಕುಟುಂಬದವರು ಅದೇ ಕಾಂಪೌಂಡ್’ನಲ್ಲಿ ಬೇರೆ ಮನೆಯಲ್ಲಿ ವಾಸವಾಗಿದ್ದಾರೆ. ಆರೋಪಿಯ ಮೊಬೈಲ್ ಪರಿಶೀಲಿಸಿದಾಗ ಸಂತ್ರಸ್ತೆಯೊಂದಿಗೆ ಅಶ್ಲೀಲ ವಿಡಿಯೋ ಮಾಡಿಕೊಂಡಿರುವುದು ಗೊತ್ತಾಗಿದೆ. ಆಕೆ ಗರ್ಭಿಣಿಯಾಗಿರುವುದು ಗೊತ್ತಾಗಿದೆ. ಈ ಹಿಂದೆ ಹಲವು ಸಲ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ದೃಶ್ಯಗಳನ್ನು ಮೊಬೈಲ್ ನಲ್ಲಿ ದಾಖಲಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

driving
- Advertisement -

Related news

error: Content is protected !!