Monday, June 22, 2026
spot_imgspot_img
spot_imgspot_img

ಮಂಗಳೂರು: ಅಡಿಕೆ ಬೆಲೆಯಲ್ಲಿ ದಾಖಲೆ; ಸಂತಸಗೊಂಡ ಅಡಿಕೆ ಬೆಳೆಗಾರರು

- Advertisement -
- Advertisement -

ಮಂಗಳೂರು:ಕರಾವಳಿ ಭಾಗದ ಅಡಿಕೆ ಬೆಳೆಗಾರರು ಬಂಪರ್ ಬೆಲೆಯಿಂದ ಸಂತಸಗೊ0ಡಿದ್ದಾರೆ. ಮಾರುಕಟ್ಟೆಯಲ್ಲಿ ಅಡಿಕೆಗೆ ಬಂಪರ್ ಬೆಲೆ ಬಂದಿದೆ. ಇತಿಹಾಸದಲ್ಲಿಯೇ ಹೊಸ ಅಡಿಕೆ ಕೆ.ಜಿ.ಗೆ 505 ರೂಪಾಯಿಗೆ ಮಾರಾಟವಾಗುವ ಮೂಲಕ ದಾಖಲೆಯನ್ನು ಬರೆದಿದೆ. ಸದ್ಯ ಹೊಸ ಅಡಿಕೆಗೆ ಉತ್ತಮ ಧಾರಣೆ ಬಂದಿದ್ದರೂ ಕೂಡ ಅಡಿಕೆಯನ್ನು ಮಾರುಕಟ್ಟೆಗೆ ಬಿಡಲು ಬೆಳೆಗಾರರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.

ಬೆಳ್ಳಾರೆಯ ಮಾರುಕಟ್ಟೆಯಲ್ಲಿ ಕೆ.ಜಿ ಅಡಿಕೆ 505ರೂಪಾಯಿಗೆ ಮಾರಾಟವಾಗಿದ್ದು, ಕ್ವಿಂಟಾಲ್ ಅಡಿಕೆ 50 ಸಾವಿರದ ಗಡಿದಾಟಿದೆ. ಹಳೆಯ ಹಾಗೂ ಹೊಸ ಅಡಿಕೆಯ ಧಾರಣೆ 500 ರೂಪಾಯಿಗಿಂತ ಹೆಚ್ಚಾಗಿರುವುದು ಹೊಸ ದಾಖಲೆಯಾಗಿದೆ. ಉತ್ತರ ಭಾರತದಲ್ಲಿ ಅಡಿಕೆಗೆ ಭಾರೀ ಬೇಡಿಕೆ ಎದುರಾಗಿದೆ. ಹೀಗಾಗಿ ಅಡಿಕೆಯ ದರ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಲ್ಲಿದ್ದಾರೆ ಬೆಳೆಗಾರರು.

ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಕೆ.ಜಿ. ಅಡಿಕೆಗೆ 480 ರೂಪಾಯಿ ದರವಿದೆ. ಆದ್ರೆ ಈ ದರ ಮುಂದಿನ ದಿನಗಳಲ್ಲಿ ಏರಿಕೆಯಾಗುವ ಸಾಧ್ಯತೆಯೂ ಇದೆ. ಇಷ್ಟು ವರ್ಷ ನಾನಾ ಕಾರಣಗಳಿಂದಾಗಿ ಅಡಿಕೆ ಉತ್ತಮ ಫಸಲು ದೊರೆತರೂ ಕೂಡ ಉತ್ತಮ ಧಾರಣೆ ಸಿಗದೆ ರೈತರು ಕಂಗಾಲಾಗಿದ್ದರು. ಮಾರುಕಟ್ಟೆಯಲ್ಲಿ ಹೊಸ ಹಾಗೂ ಹಳೆಯ ಅಡಿಕೆ ದಾಖಲೆಯ ಬೆಲೆ ಮಾರಾಟವಾಗುತ್ತಿರುವುದು ಬೆಳೆಗಾರರಿಗೆ ಸಂತಸ ಮೂಡಿಸಿದೆ.

- Advertisement -

Related news

error: Content is protected !!