Wednesday, June 17, 2026
spot_imgspot_img
spot_imgspot_img

ಮಂಗಳೂರು: ಅನ್ಯ ಕೋಮಿನ ಯುವಕರ ತಂಡದಿಂದ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆಗೆ ಯತ್ನ; ಹಿಂದೂ ಕಾರ್ಯಕರ್ತನ ಪ್ರಾಣ ಉಳಿಸಿದ ಯುವತಿ; ವಿಡಿಯೋ ವೈರಲ್

- Advertisement -
- Advertisement -

ಮಂಗಳೂರು: ಹಿಂದೂ ಕಾರ್ಯಕರ್ತನೋರ್ವನ ಮೇಲೆ ಅನ್ಯಕೋಮಿನ ಯುವಕರು ಹಲ್ಲೆಗೆ ಯತ್ನಿಸಿದ ಘಟನೆ ಮೂಡುಶೆಡ್ಡೆ ಜಂಕ್ಷನ್ ನಲ್ಲಿ ನಡೆದಿದೆ.

ಆರೋಪಿಗಳನ್ನು ಇಮ್ರಾನ್, ರಿಝ್ವಾನ್, ರಮೀಝ್, ಮುಸ್ತಾಫ್, ನಿಝಾಮ್, ಶಾರುಕ್, ಜಾವಿದ್, ರಾಯಿಫ್ ಮತ್ತು ನಾಲ್ವರು ಎಂದು ಗುರುತಿಸಲಾಗಿದೆ.

ಹಿಂದೂ ಕಾರ್ಯಕರ್ತನನ್ನು ಮೂಡುಶೆಡ್ಡೆ ಮಸೀದಿಯಿಂದ ಮೂಡುಶೆಡ್ಡೆ ಜಂಕ್ಷನ್ ವರಗೆ ಹಲ್ಲೆ ಮಾಡಲು ಅನ್ಯ ಕೋಮಿನ ಯುವಕರ ತಂಡ ತಲವಾರು ಹಿಡಿದು ಅಟ್ಟಾಡಿಸಿಕೊಂಡು ಬಂದಿದ್ದು ಹಿಂದೂ ಕಾರ್ಯಕರ್ತ ತನ್ನ ಪ್ರಾಣ ರಕ್ಷಣೆಗಾಗಿ ಮೂಡುಶೆಡ್ಡೆಯ ಅಂಗಡಿಯೊಳಗೆ ಸೇರಿಕೊಂಡಿದ್ದಾರೆ.

ಈ ವೇಳೆ ಅಂಗಡಿಗೆ ನುಗ್ಗಲು ಯತ್ನಿಸಿದ ಆರೋಪಿಗಳು ಅಂಗಡಿಯಲ್ಲಿದ್ದ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿ, ಬಟ್ಟೆಗಳನ್ನು ಎಳೆದಾಡಿ, ಆಕೆಯ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಯುವತಿಯ ಸಮಯ ಪ್ರಜ್ಞೆಯಿಂದ ಹಿಂದೂ ಕಾರ್ಯಕರ್ತನ ಪ್ರಾಣ ಉಳಿದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

driving
- Advertisement -

Related news

error: Content is protected !!