Thursday, May 2, 2024
spot_imgspot_img
spot_imgspot_img

ಮಂಗಳೂರು: ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದು ಲ್ಯಾಪ್‌ಟ್ಯಾಪ್‌…! ಪಾರ್ಸೆಲ್‌ ಬಂದಿದ್ದು ಕಲ್ಲಿನ ತುಂಡು ಮತ್ತು ಇಲೆಕ್ಟ್ರಾನಿಕ್ ವೇಸ್ಟ್

- Advertisement -G L Acharya panikkar
- Advertisement -

ಮಂಗಳೂರು: ಆನ್‌ಲೈನ್ ಕಂಪನಿಗಳು ದೀಪಾವಳಿ ಸಂದರ್ಭದಲ್ಲಿ ಭರ್ಜರಿ ಡಿಸ್ಕೌಂಟ್, ಗಿಫ್ಟ್ ಆಫರ್ ನೀಡುತ್ತದೆ. ಇಲ್ಲೊಬ್ಬರು ದೀಪಾವಳಿ ಆಫರ್ ನಂಬಿ ಲ್ಯಾಪ್ ಟಾಪ್ ಆರ್ಡರ್ ಮಾಡಿದ್ದರು, ಆದರೆ ಫ್ಲಿಪ್‌ ಕಾರ್ಟ್ ಕಂಪನಿಯಿಂದ ಬಂದಿದ್ದು, ಅವರಿಗೆ ಕಲ್ಲಿನ ತುಂಡು ಮತ್ತು ಇಲೆಕ್ಟ್ರಾನಿಕ್ ವೇಸ್ಟ್ ಮಾತ್ರ.

ಮಂಗಳೂರು ಮೂಲದ ಹತ್ತಿಯ ಚಿನ್ಮಯ ರಮಣ ಎಂಬವರು ಈ ಬಗ್ಗೆ ಟ್ವಿಟರ್ ನಲ್ಲಿ ಪೋಸ್ಟ್ ಹಾಕಿದ್ದರು. ಲ್ಯಾಪ್ ಟಾಪ್‌ ಆರ್ಡರ್ ಮಾಡಿದ್ದಕ್ಕೆ ಫ್ಲಿಪ್‌ ಕಾರ್ಟ್ ಕಂಪೆನಿ ಕಡೆಯಿಂದ ನನಗೆ ಕಲ್ಲು ಮತ್ತು ಇಲೆಕ್ಟ್ರಾನಿಕ್ ವೇಸ್ಟ್ ಬಂದಿದೆ ಎಂದು ಹೇಳಿದ್ದರು. ಈ ಪೋಸ್ಟ್ ವೈರಲ್ ಆಗಿದ್ದು ಹಲವರು ತಮಗಾದ ಅನುಭವ ಹಚ್ಚಿಕೊಂಡಿದ್ದಾರೆ . ಚಿನ್ಮಯ ರಮನ್‌ ಅವರು ನಾನು ಪ್ರತಿ ಬಾರಿ ಫ್ಲಿಪ್‌ ಹಾರ್ಟ್ ಬಳಸುತ್ತಿದ್ದುದಕ್ಕೆ ವಿಷಾದ ಅನಿಸುತ್ತಿದೆ. ಇದನ್ನು ಓದಿದವರು ತಮಗೂ ಇದೇ ಫೀಲ್ ಆಗಿದ್ದರೆ ಫ್ಲಿಪ್‌ ಕಾರ್ಡ್ ಬಳಕೆ ಮಾಡಬೇಡಿ. ಏನಾದರೂ ತಪ್ಪು ಆದಲ್ಲಿ ಕಂಪನಿ ನಮ್ಮ ನೆರವಿಗೆ ಬರುವುದಿಲ್ಲ ಜವಾಬ್ದಾರಿ ಹೊತ್ತುಕೊಳ್ಳುವುದಿಲ್ಲ ಅವಾಗ ನಾವು ಅಸಹಾಯಕರಾಗುತ್ತೇವೆ ಎಂದು ಬರೆದಿದ್ದರು.

ಫ್ಲಿಪ್‌ಕಾರ್ಟ್‌ನಲ್ಲಿ ಆರ್ಡರ್‌ ಬಾಕ್ಸ್ ಓಪನ್ ಮಾಡಬೇಕಿದ್ದರೆ, ಹಣ ಪಾವತಿ ಮಾಡಿರಬೇಕು. ಉತ್ಪನ್ನ ನೋಡಿ ಹಣ ಕೊಡುವ ವ್ಯವಸ್ಥೆ ಇಲ್ಲ. ಹೀಗಾಗಿ ಮೋಸ ಹೋಗುತ್ತಿದ್ದೇವೆ ಎಂದು ಹೇಳಿದ್ದಲ್ಲದೆ ತನಗೆ ಬಂದಿದ್ದ ಕಲ್ಲು ಮತ್ತು ಇಲೆಕ್ಟ್ರಾನಿಕ್ ವೇಸ್ಟ್ ಬೋರ್ಡಿನ ಫೋಟೋ ಮತ್ತು ವಿಡಿಯೋ ಹಂಚಿಕೊಂಡಿದ್ದರು. ಕಂಪನಿ ಬಳಿ ದೂರು ಕೊಟ್ಟು ಅಸಹಾಯಕನಾಗಿ ರಮಣ್ ಅವರು ಈ ರೀತಿ ಪೋಸ್ಟ್ ಮಾಡಿದ್ದರು ಎನ್ನಲಾಗುತ್ತಿದೆ.

ಟ್ವಿಟರ್‌ ಪೋಸ್ಟ್ ವೈರಲ್ ಆಗಿ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತ ಫ್ಲಿಪ್‌ಕಾರ್ಟ್ ಕಂಪನಿ ರಮಣ್ ಅವರಿಗೆ ಅವರು ನೀಡಿದ್ದ ಹಣವನ್ನು ವಾಪಸ್‌ ಮಾಡಿದ ಫ್ಲಿಪ್‌ಕಾರ್ಟ್ ಕಂಪನಿ ತನ್ನ ಸಹಾಯಕ್ಕೆ ಬಂದಿದ್ದು ನೀಡಿದ್ದ ಹಣವನ್ನು ವಾಪಸ್‌ ಕೊಟ್ಟಿದೆ ಎಂದು ರಮಣ್ ಮತ್ತೆ ಪೋಸ್ಟ್ ಮಾಡಿದ್ದಾರೆ. ಇದೇ ರೀತಿ ಕೆಲವರು ಆನ್ಲೈನ್ ಮಾರುಕಟ್ಟೆಯಲ್ಲಿ ಆಗಿರುವ ಎಡವಟ್ಟಿನ ಬಗ್ಗೆ ಬರೆದುಕೊಂಡಿದ್ದಾರೆ ಬಿಹಾರದಲ್ಲಿ ಡೋನ್‌ ಕ್ಯಾಮರಾಕ್ಕೆ ಆರ್ಡರ್‌ ಮಾಡಿದ್ದ ವ್ಯಕ್ತಿಗೆ ಚೀಲದಲ್ಲಿ ಬಟಾಟೆ ಪಾರ್ಸೆಲ್ ಬಂದಿದ್ದ ಸಂಗತಿ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಡೆದಿತ್ತು.

- Advertisement -

Related news

error: Content is protected !!