Saturday, May 4, 2024
spot_imgspot_img
spot_imgspot_img

ಮಂಗಳೂರು: ಇಂದಿನಿಂದ ಬೃಹತ್ ಕೋವಿಡ್ ಲಸಿಕಾ ಮೇಳ ಆರಂಭ

- Advertisement -G L Acharya panikkar
- Advertisement -
vtv vitla
vtv vitla
vtv vitla

ಮಂಗಳೂರು: ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ನ.26 ಹಾಗೂ 27ರಂದು ಬೃಹತ್ ಕೋವಿಡ್ ಲಸಿಕಾ ಶಿಬಿರ ಆಯೋಜಿಸಲಾಗಿದೆ.

ಈ ಬೃಹತ್ ಲಸಿಕಾ ಮೇಳವು ಜಿಲ್ಲೆಯ ಎಲ್ಲಾ ಉಪಕೇಂದ್ರಗಳು, ನಗರ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಆಸ್ಪತ್ರೆಗಳ ವ್ಯಾಪ್ತಿಯಲ್ಲಿ ನಡೆಯಲಿದೆ.

Close-up medical syringe with a vaccine.

ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ನಗರದ ಎಲ್ಲಾ ಕಾಲೇಜುಗಳ ಎನ್.ಎಸ್.ಎಸ್ ವಿದ್ಯಾರ್ಥಿಗಳು ಹಾಗೂ ಅದರ ಯೋಜನಾಧಿಕಾರಿಗಳ ಸಹಯೋಗದೊಂದಿಗೆ ಲಸಿಕಾ ಮಿತ್ರರು ಮನೆ ಮನೆಗೆ ಆಗಮಿಸಿ, ಲಸಿಕೆಯ ಅರಿವು ಮೂಡಿಸುವರು.

ಬೃಹತ್ ಲಸಿಕಾ ಮೇಳಕ್ಕೆ ಪೂರಕವಾಗಿ ನ.26 ಹಾಗೂ 27ರಂದು ಒಂದು ಮೊಬೈಲ್ ವ್ಯಾಕ್ಸಿನ್ ಯೂನಿಟ್‍ನೊಂದಿಗೆ ಜನಸಂದಣಿಯ ಸ್ಥಳಗಳಲ್ಲಿ ಪ್ರಚಾರ ಕೈಗೊಳ್ಳುವ ಲಸಿಕಾ ಮಿತ್ರರು ಲಸಿಕೆಯ ಜೊತೆಗೆ ಸಂಚರಿಸಿ ಸ್ಥಳದಲ್ಲೇ ಲಸಿಕೆ ಕೊಟ್ಟು ಜನ ಜಾಗೃತಿ ಮೂಡಿಸಲಿದ್ದಾರೆ.

ಕೆಲಸ ಕಾರ್ಯ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಎಲ್ಲಾ ನಗರ ಆರೋಗ್ಯ ಕೇಂದ್ರಗಳಲ್ಲಿ ಬೆಳಿಗ್ಗೆ 7.30 ರಿಂದ ಸಂಜೆ 7.30 ರವರೆಗೆ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

- Advertisement -

Related news

error: Content is protected !!