Tuesday, June 30, 2026
spot_imgspot_img
spot_imgspot_img

ಮಂಗಳೂರು: ಉದ್ಯಮಿಗೆ ಹಫ್ತಾಕ್ಕಾಗಿ ಜೀವ ಬೆದರಿಕೆ ಹಾಕಿದ ಭೂಗತ ಪಾತಕಿ ಕಲಿ ಯೋಗೀಶ!

- Advertisement -
- Advertisement -
driving

ಮಂಗಳೂರು: ಮೂಲ್ಕಿ ಮೂಲದ ಉದ್ಯಮಿಯೊಬ್ಬರಿಗೆ ಭೂಗತ ಪಾತಕಿ ಕಲಿ ಯೋಗೀಶ ಎಂಬ ವ್ಯಕ್ತಿ ಮತ್ತೆ ಕರೆ ಮಾಡಿ, ಹಫ್ತಾಕ್ಕಾಗಿ ಜೀವ ಬೆದರಿಕೆ ಒಡ್ಡಿರುವ ಘಟನೆ ನಡೆದಿದೆ.

ಮೂಲ್ಕಿ ಮೂಲದ ಉದ್ಯಮಿ ನಾಗರಾಜ್, ಕಾಂಕ್ರೀಟ್‌ ಮತ್ತು ಪೈಪ್ ಇನ್ನಿತರ ಬ್ಯುಸಿನೆಸ್ ನಡೆಸಿಕೊಂಡಿದ್ದಾರೆ. 2017ರಲ್ಲಿಯೂ ಕಲಿ ಯೋಗೇಶ ಇದೇ ರೀತಿ ಇಂಟರ್ನೆಟ್ ಕರೆ ಮಾಡಿ ಬೆದರಿಕೆ ಒಡ್ಡಿದ್ದು, ಅನಂತರ ಎರಡು ದಿನಗಳ ಬಳಿಕ ಬೈಕಿನಲ್ಲಿ ಬಂದಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ನಾಗರಾಜ್ ಅವರ ಹಾರ್ಡ್ ವೇರ್ ಶಾಪ್ ಮೇಲೆ ಫೈರ್ ಮಾಡಿ ಹೋಗಿದ್ದರು ಬಗ್ಗೆ ಮೂಲ್ಕಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ಆರೋಪಿ ಹಳೆಯಂಗಡಿ ನಿವಾಸಿ ಕಲಿ ಯೋಗೇಶ ಎನ್ನಲಾಗಿದೆ. ಕಳೆದ ಎಂಟು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಈತ ವಿದೇಶದಲ್ಲಿ ನೆಲೆಸಿದ್ದಾನೆ ಎನ್ನಲಾಗಿದೆ. ಮೂಲ್ಕಿ ಸಮೀಪದ ಕೊಳ್ನಾಡಿನಲ್ಲಿ ಹಾರ್ಡ್ ವೇರ್ ವ್ಯವಹಾರ ಹೊಂದಿರುವ ನಾಗರಾಜ್ ಎಂಬವರಿಗೆ ಹಣ ನೀಡುವಂತೆ ಒತ್ತಾಯಿಸಿ, ಬೆದರಿಕೆ ಹಾಕಿದ್ದು, ಈ ಘಟನೆ ಬಗ್ಗೆ ಮೂಲ್ಕಿ ಠಾಣೆಯಲ್ಲಿ ದೂರು ನೀಡಿದ್ದಾರೆ.

- Advertisement -

Related news

error: Content is protected !!