Sunday, September 27, 2026
spot_imgspot_img
spot_imgspot_img

ಮಂಗಳೂರು: ಉರ್ವ ಸ್ಟೋರ್ ಬಳಿ ಬ್ಯಾಂಕ್ ಗೆ ಹೋಗಿ ಬರುತ್ತೇನೆ ಎಂದು ಹೇಳಿ ತೆರಳಿದ ಬೆಳ್ಳಾರೆ ಮೂಲದ ವಿವಾಹಿತ ಮಹಿಳೆ ನಾಪತ್ತೆ..!

- Advertisement -
- Advertisement -

ಮಂಗಳೂರು: ಬ್ಯಾಂಕಿಗೆ ಹೋಗಿ ಬರುತ್ತೇನೆ ಎಂದು ಹೇಳಿ ತೆರಳಿದ ಮಹಿಳೆ ನಾಪತ್ತೆಯಾದ ಘಟನೆ ಮಂಗಳೂರಿನ ಉರ್ವ ಸ್ಟೋರ್ ಬಳಿ ನಡೆದಿದೆ. ನಾಪತ್ತೆಯಾದ ಮಹಿಳೆಯನ್ನು ಬೆಳ್ಳಾರೆ ಮೂಲದ ಪ್ರಸ್ತುತ ಮಂಗಳೂರಿನಲ್ಲಿರುವ ವಿವಾಹಿತ ಮಹಿಳೆ ದಿವ್ಯ(29) ಎಂದು ಗುರುತಿಸಲಾಗಿದೆ.

ಬೆಳ್ಳಾರೆ ಕಲ್ಮಡ್ಕದ ಮನೆಯಿಂದ ಮುಂಜಾನೆ ಪತಿಯೊಂದಿಗೆ ಮಂಗಳೂರಿಗೆ ಬಂದಿದ್ದ ಮಹಿಳೆಯು ಉರ್ವ ಸ್ಟೋರ್ ಬಳಿ ಬ್ಯಾಂಕಿಗೆ ಹೋಗಿ ಬರುತ್ತೇನೆ ಎಂದು ತಿಳಿಸಿ ಬಳಿಕ ಬಾರದೆ, ಫೋನ್ ಕರೆಗೂ ಸಿಗದೇ ನಾಪತ್ತೆಯಾಗಿದ್ದಾರೆ, ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಮಹಿಳೆಯ ಪತಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸಿ ಪತ್ತೆ ಹಚ್ಚಲು ಕೋರಿಕೊಂಡಿದ್ದರು.

vtv vitla
vtv vitla

ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಯ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

vtv vitla
vtv vitla
suvarna gold
- Advertisement -

Related news

error: Content is protected !!