Saturday, May 4, 2024
spot_imgspot_img
spot_imgspot_img

ಮಂಗಳೂರು: ಎಟಿಎಂಗೆ ಹಾನಿ ಮಾಡಿದ ಪ್ರಕರಣ; ಆರೋಪಿಗೆ ಶಿಕ್ಷೆ ಪ್ರಕಟ

- Advertisement -G L Acharya panikkar
- Advertisement -

ಮಂಗಳೂರು: ನಗರದ ಬೋಳೂರು ಗ್ರಾಮದ ಮಠದಕಣಿಯಲ್ಲಿ ಕೆನರಾ ಬ್ಯಾಂಕ್‌ ಕಟ್ಟಡದಲ್ಲಿರುವ ಎಟಿಎಂ ಕೇಂದ್ರದ ಬಾಗಿಲಿನ ಗಾಜಿಗೆ ಕಲ್ಲೆಸೆದು ಬ್ಯಾಂಕ್‌ಗೆ ನಷ್ಟವನ್ನುಂಟು ಮಾಡಿದ ಪ್ರಕರಣದಲ್ಲಿ ಮಠದಕಣಿಯ ಯುವಕನಿಗೆ 6ನೇ ಜೆಎಂಎಫ್‌ಸಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಮಠದಕಣಿಯ ಮನೀಶ್‌(20) ಶಿಕ್ಷೆಗೊಳಗಾದವನು. ಈತ 09.07.2020 ರಂದು ಎಟಿಎಂ ಕೇಂದ್ರದ ಗಾಜಿನ ಬಾಗಿಲಿಗೆ ಕಲ್ಲೆಸೆದು ಜಖಂಗೊಳಿಸಿದ್ದ. ಇದರಿಂದ 3540 ರೂ.ನಷ್ಟು ನಷ್ಟ ಉಂಟಾಗಿತ್ತು. ಆಗಿನ ಬರ್ಕೆ ಎಸ್‌ಐ ಹಾರುನ್‌ ಅಖ್ತರ್‌ ಅವರು ಈ ಕುರಿತು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

6ನೇ ಜೆಎಂಎಫ್‌ಸಿ ನ್ಯಾಯಾಧೀಶೆ ಪೂಜಾಶ್ರೀ ಎಚ್‌.ಎಸ್‌ ಅವರು 3500 ರೂ. ದಂಡ, ದಂಡ ಪಾವತಿಗೆ ತಪ್ಪಿದಲ್ಲಿ 10 ದಿನಗಳ ಸಾಮಾನ್ಯ ಸೆರೆಮನೆ ವಾಸ ಮತ್ತು ಕೆಪಿಡಿಎಲ್‌ಪಿ ಕಾಯ್ದೆಯಡಿ ಅಪರಾಧಕ್ಕಾಗಿ 8 ತಿಂಗಳು ಸಾಮಾನ್ಯ ಸಜೆ ಮತ್ತು 2000 ರೂ. ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 10 ದಿನಗಳ ಸಾಮಾನ್ಯ ಸೆರೆಮನೆ ವಾಸ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಪ್ರಭಾರ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಮೋಹನ್‌ ಕುಮಾರ್‌ ಬಿ ಅವರು ವಾದ ಮಂಡಿಸಿದ್ದರು.

- Advertisement -

Related news

error: Content is protected !!