Saturday, June 13, 2026
spot_imgspot_img
spot_imgspot_img

ಮಂಗಳೂರು: ಎಸ್‌ಡಿಪಿಐ ಸಮಾವೇಶದ ವೇಳೆ ಪೊಲೀಸರ ನಿಂದಿಸಿದ ಪ್ರಕರಣ: ಮತ್ತೆ ಆರು ಜನರ ಬಂಧನ; ಬಂಧಿತರ ಸಂಖ್ಯೆ 15ಕ್ಕೆ ಏರಿಕೆ

- Advertisement -
- Advertisement -

ಮಂಗಳೂರು: ಎಸ್‌ಡಿಪಿಐ ಸಮಾವೇಶದ ವೇಳೆ ಪೊಲೀಸರನ್ನು ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟು ಬಂಧಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

ವೀಡಿಯೋ ಮಾಡಿ ವೈರಲ್‌ ಮಾಡಿದ ಗುರುಪುರದ ಸಫ್ವಾನ್‌ (26), ಗುರುಪುರದ ಆಟೋ ಚಾಲಕ ಅಬ್ದುಲ್‌ ಸಲಾಂ (23), ಸೂರಲ್ಪಾಡಿಯ ಮೊಹಮ್ಮದ್ ಹುನೈಜ್ (23), ಬಸ್‌ ಚಾಲಕ ಗುರುಪುರದ ಮೊಹಮ್ಮದ್‌ ಸಾಹಿಲ್‌ (23), ಆಟೋ ಚಾಲಕ ಗುರುಪುರದ ಮೊಹಮ್ಮದ್ ಫಲಾಹ್ (20) ಮತ್ತು ಮೈಸೂರಿನಲ್ಲಿ ಬೇಕರಿಯಲ್ಲಿ ಕೆಲಸ ಮಾಡುತ್ತಿರುವ ಇನೋಳಿಯ ಅಬ್ದುಲ್‌ ಲತೀಫ್‌ (31) ಬಂಧಿತರು.ಬಂಧಿತರಿಂದ ಒಂದು ಕಾರು ಮತ್ತು ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

vtv vitla
vtv vitla
- Advertisement -

Related news

error: Content is protected !!