Sunday, June 14, 2026
spot_imgspot_img
spot_imgspot_img

ಮಂಗಳೂರು: ಕಚೇರಿಗೆ ನುಗ್ಗಿ ಮೂವರು ಮಹಿಳೆಯರ ಮೇಲೆ ಹಲ್ಲೆ ಪ್ರಕರಣ; ಶಾಕಿಂಗ್ ವಿಚಾರ ಬಾಯ್ಬಿಟ್ಟ ಆರೋಪಿ!

- Advertisement -
- Advertisement -
driving

ಮಂಗಳೂರು: ಡಯಟ್‌ ಕಚೇರಿಗೆ ನುಗ್ಗಿ ಮೂವರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನವೀನ್ ಶೆಟ್ಟಿ ಎಂಬಾತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿ ನವೀನ್ ಲೆಕ್ಚರರ್ ವೀಣಾ ನನ್ನ ಮೇಲೆ ಬ್ಲ್ಯಾಕ್ ಮ್ಯಾಜಿಕ್ ಮಾಡಿದ್ದಾರೆ. ಕಾಲೇಜಿನಲ್ಲಿ ಓದುತ್ತಿದ್ದಾಗ ಲೆಕ್ಚರರ್ ವೀಣಾ ನನ್ನನ್ನು ಅವಮಾನಿಸಿ, ಕಿರುಕುಳ ನೀಡುತ್ತಿದ್ದರು. ಅವರು ಬ್ಲ್ಯಾಕ್ ಮ್ಯಾಜಿಕ್ ಮಾಡಿದ್ದು, ಅದರಿಂದ ನನಗೆ ತೊಂದರೆಯಾಗುತ್ತಿದೆ ಎಂದಿದ್ದಾನೆ.

ನಿನ್ನೆ ಇದೇ ಕಾರಣಕ್ಕೆ ಬ್ಲ್ಯಾಕ್ ಮ್ಯಾಜಿಕ್ ತೆಗೆಯುವಂತೆ ಹೇಳಲು ಕಚೇರಿಗೆ ಬಂದಿದ್ದೆ. ಆದರೆ ವೀಣಾ ಆಫೀಸಿಗೆ ಬಂದಿಲ್ಲ ಎಂದು ಹೇಳಿದರು. ಇದರಿಂದ ಕೋಪ ಬಂದು ಹಲ್ಲೆ ಮಾಡಿದ್ದೇನೆ ಎಂದು ಹೇಳಿದ್ದಾನೆ.

ಇದನ್ನೂ ಓದಿ: ಮಂಗಳೂರು: ಹಾಡಹಗಲೇ ಮೂವರು ಮಹಿಳೆಯರ ಮೇಲೆ ಅಪರಿಚಿತನಿಂದ ತಲ್ವಾರ್ ದಾಳಿ; ಓರ್ವ ಮಹಿಳೆಯ ಸ್ಥಿತಿ ಗಂಭೀರ!

ಸರ್ಕಾರಿ ಕಚೇರಿಗೆ ನುಗ್ಗಿದ್ದ ಆರೋಪಿ ನವೀನ್ ಅಲ್ಲಿನ ಮೂವರು ಮಹಿಳೆಯರು, ನಿರ್ಮಲಾ, ರೀನಾ ರಾಯ್ ಹಾಗೂ ಗುಣವತಿ ಎಂಬುವವರ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆಸಿದ್ದ. ಗಾಯಗೊಂಡವರಲ್ಲಿ ನಿರ್ಮಲಾ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!