Tuesday, July 28, 2026
spot_imgspot_img
spot_imgspot_img

ಮಂಗಳೂರು: ಕಪಿಲ ಗೋಶಾಲೆಯ ಜಾನುವಾರು ಕಳವು; ಒರ್ವನ ಬಂಧನ

- Advertisement -
- Advertisement -

ಮಂಗಳೂರು: ನಗರದ ಮರವೂರಿನಲ್ಲಿರುವ ಕಪಿಲ ಗೋಶಾಲೆಯ ಮೇಯಲು ಬಿಟ್ಟ ಜಾನುವಾರು ಕಳವುಗೈದ ಆರೋಪಿಯನ್ನು ಬಟ್ಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಬಜ್ಪೆ ಭದ್ರಿಕರ ನಿವಾಸಿ ಮಹಮ್ಮದ್ ರಾಝಿಕ್ (19) ಬಂಧಿತ ಆರೋಪಿ, ನಗರದ ಮರವೂರಿನಲ್ಲಿರುವ ಕಪಿಲ ಗೋಶಾಲೆಯ ಮೇಯಲು ಬಿಟ್ಟ ಒಂದು ಹೋರಿ ಹಾಗೂ ಕಪಿಲ ತಳಿಯ ಎರಡು ಹಸುಗಳನ್ನು ಗೋಕಳ್ಳರು ಕಳವುಗೈದಿದ್ದಾರೆ. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮಹಮ್ಮದ್ ರಾಝಿಕ್ ನನ್ನು ಕಂಜಾರು ಮರವೂರಿನಲ್ಲಿ ಬಂಧಿಸಿದ್ದಾರೆ. ಅಲ್ಲದೆ ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳು ಶಾಮೀಲಾಗಿದ್ದು, ಅವರನ್ನು ಶೀಘ್ರ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

vtv vitla
- Advertisement -

Related news

error: Content is protected !!