Friday, June 19, 2026
spot_imgspot_img
spot_imgspot_img

ಮಂಗಳೂರು: ಕಸ ತುಂಬಿದ್ದ ಸ್ಥಳವೀಗ ‘ಸೆಲ್ಫಿ ಸ್ಪಾಟ್’..!

- Advertisement -
- Advertisement -

ಮಂಗಳೂರು: ಬಂಗ್ರಕೂಳೂರು ವಾರ್ಡ್‌ನ ಕೋಡಿಕಲ್‌ನಲ್ಲಿ ಕಸದರಾಶಿ ತುಂಬಿದ್ದ ಬ್ಲ್ಯಾಕ್ ಸ್ಪಾಟ್‌ ಇದೀಗ ಸೆಲ್ಫಿ ಸ್ಪಾಟ್‌‌ ಆಗಿ ಪರಿವರ್ತನೆಗೊಂಡಿದೆ.

ಸೆಲ್ಫಿ ಸ್ಪಾಟ್‌‌‌ ಆಗಿ ಪರಿವರ್ತಿಸಿದ ಸ್ಥಳವನ್ನು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಹಾಗು ಮಹಾನಗರ ಪಾಲಿಕೆಯ ಮಹಾಪೌರ ಪ್ರೇಮಾನಂದ ಶೆಟ್ಟಿ ಅವರು ಉದ್ಘಾಟಿಸಿದರು.

“ಕೋಡಿಕಲ್‌ 9ನೇ ಕ್ರಾಸ್ ರೋಡ್‌ನಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಕೆಲ ಮಂದಿ ತ್ಯಾಜ್ಯವನ್ನು ಎಸೆದು ಪರಿಸರವನ್ನು ಮಲಿನಗೊಳಿಸುತ್ತಿದ್ದರು. ಈ ಸ್ಥಳವನ್ನು ಸ್ವಚ್ಛಗೊಳಿಸಿ ನಮ್ಮ ಸ್ವಚ್ಛ ಬಂಗ್ರಕೂಳೂರು ವಾರ್ಡ್ ಪರಿಕಲ್ಪನೆಗೆ ನನ್ನೊಂದಿಗೆ ಕೈ ಜೋಡಿಸಿ ಈ ಸ್ಥಳವನ್ನು ಒಂದು ಸುಂದರವಾದ “ಸೆಲ್ಫಿ ಸ್ಪಾಟ್ “ನ್ನಾಗಿ ಪರಿವರ್ತಿಸಲು ಸಹಕರಿಸಿದ ಶ್ರೀ ನಾಗಬ್ರಹ್ಮ ತರುಣ ವೃಂದ (ರಿ)ಯುವಕರ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು. ಪರಿಸರ ಸಂರಕ್ಷಣೆಯ ಒಂದು ಸುಂದರ ವರ್ಣರಂಜಿತ ಚಿತ್ರಬಿಡಿಸಿದ ಪಿಕ್ಸ್ನಿಸಿಲ್‌‌ ಮಂಗಳೂರಿನ ಖ್ಯಾತ ಯುವ ಕಲಾವಿದರ ತಂಡಕ್ಕೆ ಧನ್ಯವಾದಗಳು. ಸಹಕರಿಸಿದ ಎಲ್ಲಾ ಕಾರ್ಯಕರ್ತ ಮಿತ್ರರಿಗೆ ಪ್ರೀತಿ ಪೂರ್ವಕ ನಮನಗಳು” ಎಂದು ಕಿರಣ್‌ ಕುಮಾರ್‌ ಕೋಡಿಕಲ್‌ ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಉಪ ಮೇಯರ್ ಸುಮಂಗಲ ರಾವ್, ಪಾಲಿಕೆ ಸದಸ್ಯರಾದ ಮನೋಜ್ ಕುಮಾರ್, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮಹಾನಗರ ಕಾರ್ಯವಾಹ ಮನೋಹರ್ ಕೋಡಿಕಲ್, ಹಿರಿಯ ಗೋಪಾಲ್ ಕೋಟ್ಯಾನ್, ಹರೀಶ್ ಶೆಟ್ಟಿ, ಕಿರಣ್ ಜೋಗಿ, ಕಾರ್ಯಕರ್ತ ಮಿತ್ರರು ಹಾಗೂ ನಾಗರಿಕರು ಉಪಸ್ಥಿತರಿದ್ದರು.

- Advertisement -

Related news

error: Content is protected !!