Sunday, April 28, 2024
spot_imgspot_img
spot_imgspot_img

ಮಂಗಳೂರು: ಕಾರು ಮಾರಟಕ್ಕಿದೆ ಎಂದು ಕರೆದು ದರೋಡೆ.! ಆರೋಪಿಗಳು ಅಂದರ್‍

- Advertisement -G L Acharya panikkar
- Advertisement -

ಮಂಗಳೂರು: ಕಾರು ಖರೀದಿಗೆಂದು ಹೋದವರಿಂದ ಹಣ ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಗೆ ಆರೋಪಿಗಳಿಗೆ 7 ವರ್ಷ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ.

ಕಿಲಿಂಜಾರು ಗ್ರಾಮದ ಶಿವಪ್ರಸಾದ್ ಆಲಿಯಾಸ್ ಅಯ್ಯಪ್ಪ(30), ಸಂದೀಪ್ ಬಿ.ಪೂಜಾರಿ(28), ಕಾರ್ತಿಕ್ ಶೆಟ್ಟಿ(27), ತೆಂಕ ಎರ್ಮಾಳಿನ ವರುಣ್ ಕುಮಾರ್(26), ಹೆಜಮಾಡಿಯ ಸುವಿನ್ ಕಾಂಚನ್ ಆಲಿಯಾಸ್ ಮುನ್ನ(25), ಪಡುಪೆರಾರದ ಗೋಪಾಲ ಗೌಡ(39), ಕೊಡೆತ್ತೂರಿನ ಸುಜಿತ್ ಶೆಟ್ಟಿ, ಕಿಲೆಂಜಾರಿನ ಸುಧೀರ್ ಶಿಕ್ಷೆಗೊಳಗಾದ ಅಪರಾಧಿಗಳು.

ಅಶೋಕನಗರದ ಚಿದಾನಂದ ಶೆಟ್ಟಿ ಹಳೆಯ ಕಾರು ಖರೀದಿಸಲು ಪ್ರಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಕಿಲೆಂಜಾರಿನ ಸುಧೀರ್ ಎಂಬಾತ ಚಿದಾನಂದ ಶೆಟ್ಟಿಗೆ ಕರೆ ಮಾಡಿ, “ಚಿಕ್ಕಪ್ಪನ ಹಳೆಯ ಕಾರು ಮಾರಾಟಕ್ಕಿದೆ. ಈ ಬಗ್ಗೆ ಮಾತನಾಡಲು ಸುರತ್ಕಲ್ ಬಳಿ ಬನ್ನಿ” ಎಂದು ಕರೆದಿದ್ದ. ಅದರಂತೆ ಚಿದಾನಂದ ಶೆಟ್ಟಿ 2016ರ ಡಿ.23ರಂದು ಗೆಳೆಯ ಅಶ್ವಿತ್‌ರೊಂದಿಗೆ ಸುರತ್ಕಲ್ ಬಸ್ ನಿಲ್ದಾಣಕ್ಕೆ ತೆರಳಿದ್ದರು. ಅಲ್ಲಿಗೆ ಬಂದಿದ್ದ ಸುಧೀರ್, ಸಂಜೆ ಮುಂಗಡ ಹಣ ತೆಗೆದುಕೊಂಡು ಕಾರ್ನಾಡ್ ಜಂಕ್ಷನ್‌ಗೆ ಬರುವಂತೆ ತಿಳಿಸಿದ್ದ. ಅದನ್ನು ನಂಬಿ ಚಿದಾನಂದ ಶೆಟ್ಟಿ ಅವರು, ಅಶ್ವಿತ್ ಮತ್ತು ಭರತ್ ಅವರೊಂದಿಗೆ ಕಾರಿನಲ್ಲಿ ₹2 ಲಕ್ಷ ಹಣದೊಂದಿಗೆ ಕಾರ್ನಾಡಿಗೆ ತೆರಳಿದ್ದರು. ಬಳಿಕ ಸುಧೀರ್‌ನೊಂದಿಗೆ ತಾಳಿಪ್ಪಾಡಿ ಹೊಸಮನೆ ಎಂಬಲ್ಲಿನ ಗುಡ್ಡ ಪ್ರದೇಶಕ್ಕೆ ತೆರಳಿದರು. ಅಲ್ಲಿ ಸುಧೀರ್ ಕಾರಿನಿಂದ ಇಳಿದು “ಚಿಕ್ಕಪ್ಪನ ಮನೆ ಇಲ್ಲಿಯೇ ಇದೆ. ಅವರನ್ನು ಕರೆದುಕೊಂಡು ಬರುತ್ತೇನೆ” ಎಂದು ಹೋಗಿದ್ದ. ಅಷ್ಟರಲ್ಲಿ ತಲವಾರು, ಕಬ್ಬಿಣದ ರಾಡ್, ಪಂಚ್‌ಗಳೊಂದಿಗೆ ಕಾರು, ಸ್ಕೂಟರ್ ಮತ್ತು ಬೈಕ್‌ನಲ್ಲಿ ಬಂದ ಆರೋಪಿಗಳು ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿದ್ದ ₹2 ಲಕ್ಷ ದರೋಡೆ ಮಾಡಿದ್ದರು. ಅಶ್ವಿತ್‌ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಮ್ಯಾನೇಜರ್ ಮೇಲೆ ಹಲ್ಲೆ ಮಾಡಿದ ಸಹೋದ್ಯೋಗಿಗಳು | Prajapragathi

ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗಾ ಆರೋಪಿಗಳಿಗೆ ಶಿಕ್ಷೆ ಪ್ರಕಟಮಾಗಿದ್ದು, ಆರೋಪಿತರು ದಂಡದ ಹಣ ಪಾವತಿಸಿದರೆ ದೂರುದಾರ ಚಿದಾನಂದ ಶೆಟ್ಟಿ, ಸಾಕ್ಷಿದಾರರಾದ ಅಶ್ವಿತ್, ಭರತ್, ಶಿವಪ್ರಸಾದ್ ಶೆಟ್ಟಿ ಅವರಿಗೆ ತಲಾ ₹15 ಸಾವಿರ ಹಣ ಪಾವತಿಸುವಂತೆ ಹಾಗೂ ಹಾನಿಯಾದ ಕಾರಿನ ಮಾಲೀಕ ಶಿವಪ್ರಸಾದ್ ಶೆಟ್ಟಿಗೆ ಸೂಕ್ತ ಪರಿಹಾರ ನೀಡಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಆದೇಶಿಸಲಾಗಿದೆ.

- Advertisement -

Related news

error: Content is protected !!