Saturday, May 18, 2024
spot_imgspot_img
spot_imgspot_img

ಮಂಗಳೂರು: ಕೆಎಂಎಫ್‌ನಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ಅಮಾಯಕರಿಗೆ ಕೋಟ್ಯಾಂತರ ರೂ ಪಂಗನಾಮ; ಈತನ ಸ್ಟೋರಿ ಕೇಳಿದ್ರೆ ನೀವು ಬೆಚ್ಚಿಬೀಳ್ತಿರ

- Advertisement -G L Acharya panikkar
- Advertisement -
vtv vitla

ಮಂಗಳೂರು: ಕೆಲಸ ಕೊಡಿಸುವ ನೆಪದಲ್ಲಿ ಅಮಾಯಕರಿಗೆ ಕೋಟ್ಯಾಂತರ ರೂಪಾಯಿ ಪಂಗನಾಮ ನಾಮ ಹಾಕಿದ್ದ ಆರೋಪಿ ರಾಮಪ್ರಸಾದ್‌ ಈಗ ಪೊಲೀಸ್‌ ಅತಿಥಿಯಾಗಿದ್ದಾನೆ.

ಈತನ ನಿಜವಾದ ಹೆಸರು ರಾಮ್‌ಪ್ರಸಾದ್‌ ಜನರಿಗೆ ವಂಚನೆ ಮಾಡೋ ಸಲುವಾಗಿ ಹೆಸರನ್ನು ಹರೀಶ್‌ ಎಂದು ಬದಲಾಯಿಸಿ ಕೆಎಂಎಫ್‌ ಮಂಗಳೂರು ಇದರ ನಿರ್ದೇಶಕ ಎಂದು ಹೆಳಿಕೊಂಡು ತಿರುಗಾಡುತ್ತಿದ್ದ. ಈತ ಊರು ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಮಲಾರು.

ಈತನ ತಂದೆ ವೃತ್ತಿಯಲ್ಲಿ ಶಿಕ್ಷಕ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಕೇರಳ ಸರ್ಕಾರವು ಅತ್ಯುತ್ತಮ ರಾಜ್ಯ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದ್ದರು. ಆದರೆ ಮಗ ಮಾತ್ರ ನೀಚ ಕೆಲಸ ಮಾಡಿಕೊಂಡು ಮುಗ್ದ ಜನರಿಗೆ ವಂಚನೆ ಮಾಡಿ ಕೋಟ್ಯಾಂತರ ಹಣವನ್ನು ಕಬಳಿಸಿದ ಭೂಪ.

ಕೆಎಂಎಫ್‌ನಲ್ಲಿ ಕೆಲಸ ಕೊಡುವುದಾಗಿ ನಂಬಿಸಿ ಬರೋಬ್ಬರಿ 150 ಜನರಿಗೆ 2.50 ಕೋಟಿ ರೂಪಾಯಿಗೂ ಹೆಚ್ಚು ಪಂಗನಾಮ ಹಾಕಿದ ಆರೋಪಿ ರಾಮ್‌ಪ್ರಸಾದ್‌ ಯಾನೆ ಹರೀಶ್‌ ನನ್ನು ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಅವರ ನೇತೃತ್ವದಲ್ಲಿ ಮಂಗಳೂರು ನಗರ ಸಿಸಿಬಿ ಪೊಲೀಸರಿಗೊಪ್ಪಿಸಿದ್ದಾರೆ.

ರಾಮ್‌ಪ್ರಸಾದ್‌ ಯಾನೆ ಹರೀಶ್‌ ತಾನು ಕೆ ಎಂಎಫ್ ನಿರ್ದೇಶಕ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ. ಅಮಾಯಕರಿಗೆ ಕೆಎಂಎಫ್‌ ಮಂಗಳೂರು ಇದರ ವಿವಿಧ ವಿಭಾಗಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿಕೊಂಡು ವಂಚಿಸಿದ್ದಾನೆ. ಅಲ್ಲದೆ ಕೆಎಂಎಫ್‌ ಹೆಸರಿನಲ್ಲಿ ಬೆಂಗಳೂರಿನಿಂದ ತರಬೇತುದಾರರನ್ನು ಕರೆಸಿ ಪುತ್ತೂರು ಮತ್ತು ಮಂಗಳೂರಿನ ಉರ್ವಾದಲ್ಲಿ 15 ದಿನಗಳ ಟ್ರೈನಿಂಗ್‌ ಕೊಟ್ಟಿದ್ದಾನೆ. ಕೆಲವರಿಗೆ ನೇಮಕಾತಿ ಆದೇಶ ಪ್ರತಿಗಳನ್ನು ತೋರಿಸಿ ವಂಚನೆ ಮಾಡುತ್ತಿದ್ದ. ಈತ ಪ್ರತೀ ವ್ಯಕ್ತಿಯಿಂದ ಕಡಿಮೆ ಎಂದರೆ 50 ಸಾವಿರದಿಂದ ಹಿಡಿದು 3.50 ಲಕ್ಷ ರೂಪಾಯಿವರೆಗೆ ಹಣ ಪಡೆದುಕೊಂಡಿದ್ದಾನೆ.

ಅದು ಗೂಗಲ್‌ ಪೇ, ಕ್ಯಾಶ್‌, ಬ್ಯಾಂಕ್‌ ಟ್ರಾನ್ಸಫರ್‌ ಸೇರಿ ಹಲವು ವಿಧಗಳಲ್ಲಿ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ. ಈ ಕ್ರಿಮಿನಲ್ ಆರೋಪಿಯ ವಂಚನೆ ತಿಳಿಯದ ಹಲವಅರ ಅಮಾಯಕರು ಮೋಸ ಹೋಗಿದ್ದಾರೆ. ಇಷ್ಟೆ ಅಲ್ಲದೆ ಅಮಾಯಕ ನಿರುದ್ಯೋಗಿ ಯುವತಿಯರಿಗೂ ವಂಚನೆ ಮಾಡಿದ್ದಾರೆ. ಹಲವು ಮಂದಿಯಿಂದ ದುಡ್ಡು ಪಡೆದುಕೊಂಡು ಯುವತಿಯರನ್ನು ಬ್ಲ್ಯಾಕ್‌ ಮೇಲ್‌ ಕೂಡಾ ಮಾಡುತ್ತಿದ್ದ. ಬೆಂಗಳೂರಿನ ಕೆಎಂಎಫ್‌ಡೈರಿಗೆ ಕೆಲ ಸಂತ್ರಸ್ತರನ್ನು ಕರೆದುಕೊಂಡು ಹೋಗಿ ಕೆಲಸದ ಪ್ರಾತ್ಯಕ್ಷಿಕೆ ತೋರಿಸಿದ್ದಾನೆ. ನೂರಾರು ಅಮಾಯಕರು ಈ ಮಹಾ ಮೋಸಗಾರನಿಂದ ವಂಚನೆಯಾಗಿದ್ದುದ್ದನ್ನು ತಿಳಿದ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಅವರು ಪೂರ್ಣ ಮಾಹಿತಿ ಪಡೆದು ಆತನನ್ನು ಕರೆಸಿಕೊಂಡು ವಿಷಯ ಕೇಳಿದಾಗ ವಂಚನೆಯನ್ನು ಬಾಯ್ಬಿಟ್ಟಿದ್ದಾನೆ.

- Advertisement -

Related news

error: Content is protected !!