Tuesday, June 9, 2026
spot_imgspot_img
spot_imgspot_img

ಮಂಗಳೂರು: ಕೆಲಸ ಸಿಗದೆ ಖಿನ್ನತೆ; ಇಂಜಿನಿಯರಿಂಗ್ ಪದವೀಧರ ನಾಪತ್ತೆ..!!

- Advertisement -
- Advertisement -

ಮಂಗಳೂರು: ಇಂಜಿನಿಯರಿಂಗ್ ಪದವೀಧರ ರಂಜಾಳ ಆಶಿಶ್ ಪ್ರಭು (24) ಎಂಬಾತ ಮಾ.5ರಂದು ಮನೆ ಬಿಟ್ಟು ಹೋಗಿದ್ದು, ಮರಳಿ ಬಾರದೆ ನಾಪತ್ತೆಯಾಗಿರುವುದಾಗಿ ಕದ್ರಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಆಶಿಶ್ ಪ್ರಭು ಕೆಲಸ ಸಿಗದೆ ಖಿನ್ನತೆಯಿಂದ ಬಳಲುತ್ತಿದ್ದು, ಕೆಲಸ ಹುಡುಕುವಂತೆ ತಂದೆ ಹೇಳಿದ್ದಕ್ಕೆ ಮನೆ ಬಿಟ್ಟು ಹೋಗುವುದಾಗಿ ತಿಳಿಸಿ ಮೊಬೈಲ್ ಪೋನ್‌ನ್ನು ಮನೆಯಲ್ಲಿಟ್ಟು ಹೋಗಿದ್ದಾರೆ ಎನ್ನಲಾಗಿದೆ.

ಸಾಧಾರಣ ಶರೀರ, ಎಣ್ಣೆಗಪ್ಪು ಮೈಬಣ್ಣ, ದುಂಡು ಮುಖ, 5.9 ಅಡಿ ಎತ್ತರ ಹೊಂದಿರುವ ಆಶಿಶ್ ಪ್ರಭು ಕನ್ನಡ, ಇಂಗ್ಲಿಷ್, ಹಿಂದಿ, ಕೊಂಕಣಿ ಭಾಷೆ ಮಾತನಾಡುತ್ತಾರೆ. ಮಾಹಿತಿ ದೊರೆತವರು ಕದ್ರಿ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!