Saturday, April 27, 2024
spot_imgspot_img
spot_imgspot_img

ವಿಟ್ಲ: ಪಬ್ಲಿಕ್ ಸ್ಕೂಲ್‌ ಉಕ್ಕುಡದಲ್ಲಿ 75ನೇ ಸ್ವಾತಂತ್ಯ್ರ ದಿನಾಚರಣೆ

- Advertisement -G L Acharya panikkar
- Advertisement -

ವಿಟ್ಲ: 75ನೇ ಸ್ವಾತಂತ್ಯ್ರ ಅಮೃತ ಮಹೋತ್ಸವದ ಧ್ವಜಾರೋಹಣವನ್ನು ಪಬ್ಲಿಕ್ ಸ್ಕೂಲಿನಲ್ಲಿ ನೆರವೇರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಉಪ್ಪಿನಂಗಡಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಅಬೂಬಕ್ಕರ್ ಪುತ್ತು ಉಪ್ಪಿನಂಗಡಿ ಇವರು ಧ್ವಜಾರೋಹಣವನ್ನು ನಡೆಸಿಕೊಟ್ಟರು.

ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಡಿದರು. ಶಾಲಾ ಸಹ ಶಿಕ್ಷಕಿಯಾದ ನಿಖಿಲ ಅವರು ಸ್ವಾತಂತ್ರ್ಯ ದಿನಾಚರಣೆಯ ಕುರಿತು ಮಾತನಾಡಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ರಶೀದ್ ವಿಟ್ಲ, ಉಪಾಧ್ಯಕ್ಷರಾದ ಅಬ್ಬಾಸ್, ಸಂಚಾಲಕರಾದ ಅಬೂಬಕ್ಕರ್, ಆಡಳಿತ ಮಂಡಳಿಯ ಸದಸ್ಯರಾದ ಹಮೀದ್, ಮನೀರ್ ದರ್ಬೆ, ಸಿದ್ದೀಕ್ ಆಲಂಗಾರ್, ಹನೀಫ್ ಕುದ್ದುಪದವು ಅತಿಥಿಗಳಾಗಿ ಉಬೈದ್, ಪೋಷಕರಾದ ಹಸನ್, ಕಲಂದರ್ ಹೀಗೆ ಹಲವು ವ್ಯಕ್ತಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಹ ಶಿಕ್ಷಕಿ ಜ್ಯೋತ್ಸ್ನಾ ರವರು ನಿರೂಪಿಸಿ ಬಂದ ಗಣ್ಯರನ್ನು ಸ್ವಾಗತಿಸಿ, ವಂದಿಸಿದರು.


ನಂತರ ಸಭಾ ಕಾರ್ಯಕ್ರಮ ನಡೆಯಿತು.ಮಕ್ಕಳ ಶಾಲಾ ಡೈರಿ ಪುಸ್ತಕವನ್ನು ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ ಅಬೂಬಕ್ಕರ್ ಪುತ್ತು ಅವರು ಬಿಡುಗಡೆಗೊಳಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ರಶೀದ್ ವಿಟ್ಲರವರು ಸ್ವಾತಂತ್ರ್ಯ ದಿನಾಚರಣೆಯ ಕುರಿತು ಮಾತಾನಾಡಿದರು. ಹಾಗೆಯೇ ಶಾಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕಿಯಾದ ಆರೀಫ ರವರು ಸ್ವಾಗತಿಸಿದರು, ಸಹ ಶಿಕ್ಷಕಿ ರಶೀದ ಬೇಗಂ ರವರು ವಂದಿಸಿದರು. ಸಹ ಶಿಕ್ಷಕಿಯರಾದ ಹೇಮಲತ, ನಿಖಿಲ, ಜ್ಯೋತ್ಸ್ನಾ ರವರು ಜೊತೆಗಿದ್ದು ಸಹಕರಿಸಿದರು. ರಮ್ಯರವರು ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಗೆ ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

- Advertisement -

Related news

error: Content is protected !!